ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲ್ ಭೂಷಣ್ ಜಾಧವ್ ಅವರಿಗೆ ತಾಯಿ ಹಾಗೂ ಪತ್ನಿ ಭೇಟಿಗೆ ಇಂದು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಪಾಕ್ ರಾಜಧಾನಿ ಇಸ್ಲಾಮಾಬಾದ್ ಅನ್ನು ತಾಯಿ ಹಾಗೂ ಪತ್ನಿ ತಲುಪಿದ್ದಾರೆ. ಇದರ ಜತೆಗೆ ಭಾರತೀಯ ದೂತವಾಸದ ಅಧಿಕಾರಿಯೊಬ್ಬರಿಗೆ ಕೂಡ ಭೇಟಿಗೆ ಅವಕಾಶ ನೀಡಲಾಗಿದೆ. ಕುಲಭೂಷಣ್ ಜತೆ ಭೇಟಿಯಾಗಲು ಅರ್ಧ ಗಂಟೆ ಕಾಲಾವಕಾಶವನ್ನು ಪಾಕ್ ಸರ್ಕಾರ ನೀಡಿದೆ.
ಜಾಧವ್ ಅವರನ್ನು ತಾಯಿ ಹಾಗೂ ಪತ್ನಿ ಭೇಟಿಯಾಗುವ ವೇಳೆ ಭಾರತದ ಡೆಪ್ಯುಟಿ ಹೈ ಕಮಿಷನರ್ ಜೆ.ಪಿ. ಸಿಂಗ್ ಅವರೂ ಜೊತೆಗಿರುತ್ತಾರೆ.
ಈ ಭೇಟಿಯ ವಿಡಿಯೋ ಮತ್ತು ಫೋಟೊ ಕೂಡ ಒದಗಿಸಲಾಗುವುದು ಎಂದು ಅಲ್ಲಿನ ವಿದೇಶ ವ್ಯವಹಾರಗಳ ಕಚೇರಿಯ ವಕ್ತಾರ ಮೊಹಮ್ಮದ್ ಫೈಸಲ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ