ಮುಂಬೈ: ಬಾಲಿವುಡ್ ನ ನಟ ರಿತೇಶ್ ದೇಶ್ ಮುಖ್ ಅವರು ಈಗ ಟೆಲ್ಸ್ ಮೋಟಾರ್ಸ್ ಇತ್ತಿಚೆಗಷ್ಟೆ ಭಾರತದಲ್ಲಿ ಬಿಡುಗಡೆ ಮಾಡಿರುವ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ಒಡೆಯರಾಗಿದ್ದಾರೆ.
ರಿತೇಶ್ ದೇಶ್ ಮುಖ್ ಅವರ 40ನೇ ವರ್ಷದ ಹುಟ್ಟುಹಬ್ಬಕ್ಕೆ ಪತ್ನಿ ಜೆನಿಲಿಯಾ ಡಿಸೋಜಾ ಅವರು ಈ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈಗ ನಟ ರಿತೇಶ್ ದೇಶ್ ಮುಖ್ ಅವರು ಭಾರತದ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್ ಯುವಿ ಕಾರ್ ನ್ನು ಹೊಂದಿರುವ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೆಂಪು ಬಣ್ಣದ ಈ ಕಾರಿನ ಜೊತೆಗೆ ನಿಂತಿರುವ ಪೋಟೋವನ್ನು ಅವರು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದು, ತನ್ನ ಪತ್ನಿಗೆ 40 ವರ್ಷದವರಿಗೂ 20 ರ ಹರೆಯದವರಂತೆ ಫೀಲ್ ಬರಿಸುವ ಕಲೆ ಗೊತ್ತಿದೆ ಎಂದು ಬರೆದುಕೊಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ