Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

'ಮೋಸ್ಟ್ ವಾಟೆಂಡ್' ಕ್ರೈಂ ಶೋ ನಿರೂಪಕನಿಗೆ ಜೀವಾವಧಿ ಶಿಕ್ಷೆ

'ಮೋಸ್ಟ್ ವಾಟೆಂಡ್' ಕ್ರೈಂ ಶೋ ನಿರೂಪಕನಿಗೆ ಜೀವಾವಧಿ ಶಿಕ್ಷೆ
ನವದೆಹಲಿ , ಬುಧವಾರ, 20 ಡಿಸೆಂಬರ್ 2017 (16:12 IST)
ನವದೆಹಲಿ: ದೂರದರ್ಶನ ಮತ್ತು ಝೀ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ ‘ಇಂಡಿಯಾಸ್‌ ಮೋಸ್ಟ್‌ ವಾಂಟೆಡ್‌’ನ ನಿರೂಪಕ ಸುಹೈಬ್‌ ಇಲ್ಯಾಸಿಗೆ ಪತ್ನಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.


ಇಲ್ಯಾಸ್‌, ತನ್ನ ಹೆಂಡತಿ ಅಂಜು ಇಲ್ಯಾಸಿಯನ್ನು ಜನವರಿ 11, 2000ದಂದು ಚೂರಿಯಿಂದ ಇರಿದಿದ್ದರು. ನಂತರ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು. ಮಾರ್ಚ್‌ 28, 2000ದಂದು ಇಲ್ಯಾಸ್‌ನನ್ನು ಬಂಧಿಸಲಾಗಿತ್ತು. ಅಂಜು ತಾಯಿ ರುಕ್ಮಾ ಸಿಂಗ್‌ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು. ಇಲ್ಯಾಸ್‌ ತನ್ನ ಹೆಂಡತಿಗೆ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದ ಎಂದು ಅಂಜು ತಾಯಿ ಮತ್ತು ಸಹೋದರಿ ಆರೋಪಿಸಿದ್ದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರ ರಾಜಕೀಯ ಕುತಂತ್ರಕ್ಕೆ ಸಿದ್ಧರಾಮಯ್ಯ ಬಿಟ್ರು ವ್ಯಂಗ್ಯದ ಬಾಣ