Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕುಲಭೂಷಣ್ ಜಾಧವ್ ಮರಣ ದಂಡನೆ ಶಿಕ್ಷೆಗೆ ತಡೆ ನೀಡಿದ ಅಂತರರಾಷ್ಟ್ರೀಯ ಕೋರ್ಟ್

ಕುಲಭೂಷಣ್ ಜಾಧವ್ ಮರಣ  ದಂಡನೆ ಶಿಕ್ಷೆಗೆ ತಡೆ ನೀಡಿದ ಅಂತರರಾಷ್ಟ್ರೀಯ ಕೋರ್ಟ್
ಹೇಗ್ , ಗುರುವಾರ, 18 ಜುಲೈ 2019 (06:19 IST)
ಹೇಗ್ : ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಆತನ  ಮರಣ  ದಂಡನೆ ಶಿಕ್ಷೆಗೆ ತಡೆ ನೀಡಿ ಅಂತರರಾಷ್ಟ್ರೀಯ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಈ ಮೂಲಕ ಭಾರತಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿದೆ.




ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದರು. ಈ ತೀರ್ಪನ್ನು ಪ್ರಶ್ನಿಸಿ  ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮೊರೆ ಹೋಗಿತ್ತು.


16 ನ್ಯಾಯಮೂರ್ತಿಗಳನ್ನು ಒಳಗೊಂಡ ಅಂತರರಾಷ್ಟ್ರೀಯ ನ್ಯಾಯಾಲಯದ ಪೀಠ ಈ ಪ್ರಕರಣದ ವಿಚಾರಣೆ ನಡೆಸಿ ಜಾಧವ್ ಅವರಿಗೆ ಮರಣ ದಂಡನೆಗೆ ತಡೆ ನೀಡಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಶಿಕ್ಷೆ ಮರು ಪರಿಶೀಲನೆಗೆ ಆದೇಶಿಸಿದೆ. ಇದರಿಂದ ಪಾಕ್ ವಿರುದ್ಧ ಭಾರತಕ್ಕೆ ಮಹತ್ವದ ಗೆಲುವು ಸಿಕ್ಕಂತಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಾಗತೀಕ ಉಗ್ರ ಹಫೀಜ್ ಸಯೀದ್ ಅರೆಸ್ಟ್