Publish Date: Fri, 13 Aug 2021 (10:00 IST)
Updated Date: Fri, 13 Aug 2021 (10:04 IST)
ಅಹಮದಾಬಾದ್(ಆ.13): ಕೋವಿಡ್ 19 ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ತೃತೀಯ ದರ್ಜೆ ಅಧಿಕಾರಿಯನ್ನು ಭಾರತೀಯ ವಾಯುಸೇನೆ ಸೇವೆಯಿಂದ ವಜಾಗೊಳಿಸಿದೆ. ದೇಶದಲ್ಲಿ ಒಟ್ಟು 9 ವಾಯುಪಡೆ ಸಿಬ್ಬಂದಿ ಲಸಿಕೆ ನಿರಾಕರಿಸಿದ್ದರು. ಅವರಿಗೆಲ್ಲಾ ವಾಯುಸೇನೆ ನೋಟಿಸ್ ನೀಡಿತ್ತು ನೋಟಿಸ್ಗೆ ಉತ್ತರಿಸದ ಒಬ್ಬನನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.
ಈ ನಿರ್ಧಾರವನ್ನು ಪ್ರಶ್ನಿಸಿ ವಜಾಗೊಂಡ ಅಧಿಕಾರಿ ಯೋಗೇಂದ್ರ ಕುಮಾರ್, ಗುಜರಾತ್ ಹೈಕೋರ್ಟ್ನ ಮೆಟ್ಟಿಲೇರಿದ್ದರು. ಹೈಕೋರ್ಟ್ ಈ ಮನವಿಯನ್ನು ವಜಾಗೊಳಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರು ಸಾಲಿಸಿಟರ್ ಜನರಲ್ ದೇವಾಂಗ್ ವ್ಯಾಸ್, ವಾಯುಸೇನೆ ತನ್ನ ಎಲ್ಲಾ ಉದ್ಯೋಗಿಗಳಿಗೂ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಕೋವಿಡ್ ವಿರುದ್ದ ಹೋರಾಡಲು ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ವಜಾಗೊಂಡ ಅಧಿಕಾರಿ ಸೇನೆ ನೀಡಿದ ನೋಟಿಸ್ಗೂ ಉತ್ತರ ನೀಡಿರಲಿಲ್ಲ ಎಂದು ಹೇಳಿದ್ದಾರೆ.
Ramya kosira
Publish Date: Fri, 13 Aug 2021 (10:00 IST)
Updated Date: Fri, 13 Aug 2021 (10:04 IST)