Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಕ್ಸಿಜನ್ ಕೊರತೆಯಿಂದ ಸಾವು: ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ!

ಆಕ್ಸಿಜನ್ ಕೊರತೆಯಿಂದ ಸಾವು: ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ!
ನವದೆಹಲಿ , ಗುರುವಾರ, 12 ಆಗಸ್ಟ್ 2021 (08:59 IST)
ನವದೆಹಲಿ(ಆ.12): ಕೋವಿಡ್ 2ನೇ ವೇಳೆ ಆಮ್ಲಜನಕದ ಕೊರತೆಯಿಂದ ಆಂಧ್ರಪ್ರದೇಶದಲ್ಲಿ ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮೊದಲ ಬಾರಿಗೆ ಸಂಸತ್ತಿನಲ್ಲಿ ಹೇಳಿದೆ. ಈ ಮೂಲಕ ಇದೇ ಮೊದಲ ಬಾರಿ ಆಮ್ಲಜನಕ ಕೊರತೆಯಿಂದ ಸಾವಾಗಿದೆ ಎಂಬುದನ್ನು ಕೇಂದ್ರ ಒಪ್ಪಿಕೊಂಡಿದೆ.

‘ಕೋವಿಡ್ 2ನೇ ಅಲೆಯ ವೇಳೆಯಲ್ಲಿ ಆಂಧ್ರಪ್ರದೇಶದಲ್ಲಿ ಜೀವ ರಕ್ಷಕಾ ವ್ಯವಸ್ಥೆಯಲ್ಲಿದ್ದ ಕೆಲವು ಸೋಂಕಿತರು ಆಮ್ಲಜನಕದ ಕೊರತ್ಥೆ ಇಂದ ಸಾವಿಗೀಡಾಗಿದ್ದಾರೆ. ಆಸ್ಪತ್ರೆಗೆ ಆಮ್ಲಜನಕ ತಲುಪುದು ತಡವಾದ್ದರಿಂದ ಮೇ 10ರಂದು ಕೆಲವರು ಮರಣಹೊಂದಿದ್ದಾರೆ. ಆಮ್ಲಜನಕ ಕೊರತೆಯಿಂದ ಸಾವಿಗೀಡಾದವರ ಮಾಹಿತಿ ನೀಡುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ. ಕೇವಲ 13 ರಾಜ್ಯಗಳು ಮಾತ್ರ ಇದಕ್ಕೆ ಉತ್ತರಿಸಿವೆ’ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವೆ ಡಾ| ಭಾರತಿ ಪವಾರ್ ಹೇಳಿದ್ದಾರೆ.
ಈ ಹಿಂದೆ ‘ಆಮ್ಲಜನಕ ಕೊರತ್ಥೆಯಿಂದ ಸಾವಿಗೀಡಾದವರ ಬಗ್ಗೆ ಯಾವುದೇ ಮಾಹಿತಿ ರಾಜ್ಯಗಳಿಂದ ಬಂದಿಲ್ಲ’ ಎಂದು ಕೇಂದ್ರ ಸರ್ಕಾರ ಹೇಳಿದ್ದು ಸಾಕಷ್ಟುವಿವಾದಕ್ಕೆ ಕಾರಣವಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ದೇವರ ನಾಡು ತಲ್ಲಣ!