Publish Date: Sat, 21 Sep 2019 (08:50 IST)
Updated Date: Sat, 21 Sep 2019 (08:51 IST)
ಬೆಂಗಳೂರು: ಕೆಲವರಿಗೆ ಲೈಂಗಿಕವಾಗಿ ಒಂದೇ ಬಾರಿ ಸೇರುವುದರಿಂದ ತೃಪ್ತಿಯಾಗುವುದಿಲ್ಲ. ತಕ್ಷಣವೇ ಮತ್ತೊಮ್ಮೆ ಸೇರಬೇಕೆನಿಸುತ್ತದೆ. ಆದರೆ ಒಮ್ಮೆ ಉದ್ರೇಕವಾದ ಬಳಿಕ ಮತ್ತೊಮ್ಮೆ ತಕ್ಷಣವೇ ಉದ್ರೇಕವಾಗದೇ ಇರುವುದರಿಂದ ಸಂಭೋಗ ಸಾಧ್ಯವಾಗುವುದಿಲ್ಲ.
ಹೀಗೆ ಯಾಕೆ ಆಗುತ್ತದೆ ಗೊತ್ತಾ? ಒಮ್ಮೆ ಜನನಾಂಗ ಉದ್ರೇಕ ಸ್ಥಿತಿಗೆ ತಲುಪಿದ ತಕ್ಷಣ ಮತ್ತೊಮ್ಮೆ ಸಂಭೋಗಿಸಲು ಸಾಧ‍್ಯವಾಗುವುದಿಲ್ಲ. ಯಾಕೆಂದರೆ ಒಮ್ಮೆ ಉದ್ರೇಕ ಸ್ಥಿತಿ ತಲುಪಿ ಸಂಭೋಗಿಸಿದ ಮೇಲೆ ಜನನಾಂಗ ವಿಶ್ರಾಂತಿ ಸ್ಥಿತಿಗೆ ತಲುಪುತ್ತದೆ. ಇದು ಮರಳಿ ಮೊದಲಿನ ಸ್ಥಿತಿಗೆ ತಲುಪಲು ಕೆಲವರಲ್ಲಿ ಗಂಟೆಗಳು ಬೇಕಾದರೆ ಮತ್ತೆ ಕೆಲವರಲ್ಲಿ ಒಂದು ದಿನ ಹಿಡಿಯಬಹುದು. ಹೀಗಾಗಿ ಎರಡು ಬಾರಿ ಒಂದೇ ಸಮಯ ಸಂಭೋಗಿಸಲು ಸಾಧ್ಯವಾಗದೇ ಹೋಗುತ್ತದೆ.