Publish Date: Fri, 20 Sep 2019 (08:52 IST)
Updated Date: Fri, 20 Sep 2019 (08:54 IST)
ಬೆಂಗಳೂರು: ಕೆಲವರಿಗೆ ಮದುವೆ ಎಂಬ ಬಂಧನಕ್ಕೆ ಬೀಳಲು ಇಷ್ಟವಿರುವುದಿಲ್ಲ. ಹಾಗಂತ ಬೇರೆ ಯಾವುದೇ ರಿಲೇಷನ್ ಶಿಪ್ ಬೆಳೆಸುವ ಆಸಕ್ತಿಯೂ ಇರುವುದಿಲ್ಲ. ಹೀಗಿರುವಾಗ ಕೇವಲ ಆತ್ಮರತಿ ಮಾಡಿಕೊಂಡು ಲೈಂಗಿಕ ಬಯಕೆ ತಣಿಸಬಹುದೇ?
ಜೀವನುದ್ದಕ್ಕೂ ಮದುವೆಯಾಗದೇ ಕೇವಲ ಆತ್ಮರತಿ ಮಾಡುತ್ತಾ ಲೈಂಗಿಕವಾಗಿ ತೃಪ್ತಿಪಟ್ಟುಕೊಳ್ಳಬಹುದೇ? ಇದರಿಂದ ತಪ್ಪೇನೂ ಇಲ್ಲ. ಆದರೆ ಒಬ್ಬ ಸಂಗಾತಿಯನ್ನು ಹುಡುಕಿಕೊಳ್ಳುವುದು ಕೇವಲ ದೈಹಿಕ ತೃಪ್ತಿಗಾಗಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಜತೆಗಾರನೊಬ್ಬನಿದ್ದರೆ ಮಾನಸಿಕವಾಗಿ ಗಟ್ಟಿಯಾಗಬಹುದು. ಹೀಗಾಗಿ ಮದುವೆ ಅಥವಾ ವಿವಾಹೇತರವಾಗಿ ಸಂಗಾತಿಯನ್ನು ಹುಡುಕಿಕೊಳ್ಳುವುದರಲ್ಲಿ ತಪ್ಪಿಲ್ಲ.