ಬೆಂಗಳೂರು: ಗರ್ಭಿಣಿಯಾಗಿದ್ದಾಗ ದೇಹದಲ್ಲಿ ಯಾವುದೇ ಬದಲಾವಣೆಗಳಾದರೂ ಬೇಡದ ಆತಂಕಗಳು ತಲೆಯಲ್ಲಿ ಓಡಾಡುತ್ತಿರುತ್ತವೆ. ಅದರಲ್ಲೂ ಈ ಸಂದರ್ಭದಲ್ಲಿ ಬಿಳಿ ಮುಟ್ಟು ಆಗುವುದು ಸಹಜ. ಇದಕ್ಕೆ ಭಯಪಡಬೇಕಾಗಿಲ್ಲ.
ಹಾಗಿದ್ದರೆ ಗರ್ಭಿಣಿಯಾಗಿದ್ದಾಗ ಬಿಳಿ ಸ್ರಾವವಾಗುವಾಗ ಅದರ ಸಾಮಾನ್ಯ ದಿನಗಳಿಗಿಂತ ಕೊಂಚ ದಪ್ಪವಾಗಿರಬಹುದು ಮತ್ತು ಕೊಂಚ ವಾಸನೆಯಿಂದ ಕೂಡಿರಬಹುದು. ಈ ಸಂದರ್ಭದಲ್ಲಿ ಇಂತಹ ಬಿಳಿಮುಟ್ಟು ಸಹಜ. ಆದರೆ ಈ ಸ್ರಾವದ ಬಣ್ಣ ಕೊಂಚ ಹಳದಿ ಅಥವಾ ಹಸಿರು ಬಣ್ಣಕ್ಕೆ ತಿರುಗಿದರೆ ಏನೋ ತೊಂದರೆಯಿದೆ ಎಂದೇ ಅರ್ಥ. ಅಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.