ಬೆಂಗಳೂರು: ಸಾಮಾನ್ಯವಾಗಿ ವೈದ್ಯರು ನೀಡುವ ಗುಳಿಗೆಯನ್ನು ನಾವು ನೀರಿನ ಜೊತೆಗೇ ಸೇವಿಸುತ್ತೇವೆ. ಇದು ಯಾಕೆ ಹೀಗೆ? ಯಾಕೆ ಬೇರೆ ಪಾನೀಯದೊಂದಿಗೆ ಮಾತ್ರೆ ಸೇವಿಸಲ್ಲ ಗೊತ್ತಾ?
ಔಷಧಿ ತೆಗೆದುಕೊಳ್ಳುವಾಗ ಕಾಫಿ, ಟೀ, ಮಜ್ಜಿಗೆ, ಜ್ಯೂಸ್ ಇನ್ನಿತರ ಯಾವುದೇ ಪಾನೀಯಗಳ ಜೊತೆ ಸೇರಿಸಿ ಸೇವಿಸಲ್ಲ. ಗುಳಿಗೆ ಬಾಯಿಗಿಟ್ಟ ಬಳಿಕ ಶುದ್ಧ ನೀರು ಸೇವಿಸಿಯೇ ಗುಳಿಗೆ ನುಂಗುತ್ತೇವೆ. ಯಾಕೆ ಇನ್ನಿತರ ಪಾನೀಯಗಳ ಜೊತೆ ಗುಳಿಗೆ ಸೇವನೆ ಅಷ್ಟು ಯೋಗ್ಯವಲ್ಲ ಎಂಬುದಕ್ಕೂ ಕಾರಣವಿದೆ.
ನಾವು ಸೇವನೆ ಮಾಡುವ ನೀರು ನೇರವಾಗಿ ಬಾಯಿಯ ಮೂಲಕ ಹೊಟ್ಟೆ ಸೇರುತ್ತದೆ. ನೀರಿನ ಜೊತೆ ಗುಳಿಗೆ ಸೇವನೆ ಮಾಡುವುದರಿಂದ ಅದು ಬಾಯಿಯಿಂದ ಸಣ್ಣ ಕರುಳಿಗೆ ಸೇರಿ ಅದರಲ್ಲಿರುವ ಅಂಶಗಳನ್ನು ಹೀರಿಕೊಂಡು ಯಾವ ಅಂಗಾಂಗಕ್ಕೆ ಸೇರಬೇಕೋ ಆ ಅಂಗಾಂಗಕ್ಕೆ ಒದಗಿಸುತ್ತದೆ.
ಈ ಕಾರಣಕ್ಕೆ ನೀರಿನ ಜೊತೆಗೇ ಗುಳಿಗೆ ಸೇವನೆ ಮಾಡಲು ಸಲಹೆ ನೀಡಲಾಗುತ್ತದೆ. ಬೇರೆ ಪಾನೀಯಗಳಲ್ಲಿರುವ ಅಂಶಗಳು ಜೀರ್ಣವಾಗಲು ಕೆಲವು ಸಮಯ ಬೇಕು. ಕೆಲವು ಪಾನೀಯಗಳು ಆರೋಗ್ಯಕ್ಕೆ ಉತ್ತಮವಲ್ಲದೆಯೂ ಇರಬಹುದು. ಹೀಗಾಗಿ ಅಂತಹ ಪಾನೀಯಗಳ ಜೊತೆ ಗುಳಿಗೆ ಸೇವಿಸಿದರೆ ಅದರ ಪರಿಣಾಮ ದೇಹಕ್ಕೆ ಸಿಗದು.