ಬೆಂಗಳೂರು: ಗೊರಕೆ ಹೊಡೆದು ಪಕ್ಕದಲ್ಲಿದ್ದವರ ನಿದ್ದೆಗೂ ಭಂಗ ತರುತ್ತಿದ್ದೀರಾ? ನಿಮ್ಮ ಈ ಅಭ್ಯಾಸದಿಂದ ಹೊರ ಬರುವುದು ಹೇಗೆಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ಹೀಗೆ ಮಾಡಿ ನೋಡಿ.
ಸಾಮಾನ್ಯವಾಗಿ ಸ್ಥೂಲಕಾಯವೂ ಗೊರಕೆಗೆ ಕಾರಣವಾಗಬಹುದು. ಹಾಗಾಗಿ ತೂಕ ಕಳೆದುಕೊಳ್ಳುವ ಯತ್ನ ನಡೆಸಿ. ಕೆಲವೊಂದು ಜೀವನ ಕ್ರಮ ಬದಲಾವಣೆಯಿಂದ ಗೊರಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಹೆಚ್ಚಾಗಿ ಅಂಗಾತ ಮಲಗುವುದರಿಂದ ಗೊರಕೆ ಹೊಡೆಯುತ್ತಾರೆ. ಹಾಗಾಗಿ ಅಂಗಾತ ಮಲಗುವ ಬದಲು ಒಂದು ಬದಿಗೆ ಮಲಗುವ ಅಭ್ಯಾಸ ಮಾಡಿ. ಮದ್ಯಪಾನ, ಕಫೈನ್ ಅಂಶದ ಆಹಾರ ಸೇವನೆಗೂ ಗುಡ್ ಬೈ ಹೇಳಿ.
ರಾತ್ರಿ ಅತಿಯಾಗಿ ಊಟ ಮಾಡುವುದು ಮಾಡಿದರೆ ಗೊರಕೆ ಬರುವ ಛಾನ್ಸ್ ಇದೆ. ಹಾಗಾಗಿ ರಾತ್ರಿ ಹಗುರವಾದ ಭೋಜನ ಮಾಡಿ. ಆದಷ್ಟು ರಾತ್ರಿ ಮಲಗುವ ಎರಡು ಗಂಟೆಗಳ ಮೊದಲು ಊಟ ಮಾಡಿ. ಇದರಿಂದ ಗೊರಕೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ