ಬೆಂಗಳೂರು: ಸಾಮಾನ್ಯವಾಗಿ ನಾವು ಚಹಾ ತಯಾರಿಸುವಾಗ ಸಿಹಿಯಾಗಿರಲು ಸಕ್ಕರೆ ಬಳಸುತ್ತೇವೆ. ಆದರೆ ಸಕ್ಕರೆ ಬದಲ ಬೆಲ್ಲ ಸೇರಿಸಿ ಸೇವಿಸುವುದರಿಂದ ಸಿಗುವ ಲಾಭವೇನು ಗೊತ್ತಾ?
ಜೀರ್ಣಕ್ರಿಯೆಗೆ
ಮಲಬದ್ಧತೆ ಸಮಸ್ಯೆಯಿರುವವರು ಬೆಲ್ಲ ಸೇವಿಸಿದರೆ ಒಳಿತು. ಹೀಗಾಗಿ ಚಹಾಕ್ಕೆ ಬೆಲ್ಲ ಸೇರಿಸಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ.
ಕಬ್ಬಿಣದಂಶ
ಬೆಲ್ಲದಲ್ಲಿ ಕಬ್ಬಿಣದಂಶ ಹೆಚ್ಚು. ಹೀಗಾಗಿ ಸಕ್ಕರೆ ಬದಲ ಬೆಲ್ಲ ಬಳಸಿದರೆ ದೇಹಕ್ಕೆ ಅಗತ್ಯವಾದ ಕಬ್ಬಿಣದಂಶ ಒದಗುವುದು.
ಶೀತ ಸಮಸ್ಯೆಗೆ
ಬೆಲ್ಲದಲ್ಲಿಯ ಶೀತ, ಕಫದಂತಹ ಸಮಸ್ಯೆಗಳ ವಿರುದ್ಧ ಹೋರಾಡುವ ಅಂಶವಿದೆ. ಹಾಗಾಗಿ ಬೆಲ್ಲ ಸೇರಿಸಿ ಚಹಾ ಸೇವಿಸಿದರೆ ಶೀತ ಸಮಸ್ಯೆ ಬಾರದು.
ರೋಗ ನಿರೋಧಕ ಶಕ್ತಿ
ಬೆಲ್ಲದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು ದೇಹ ಸುಲಭವಾಗಿ ಖಾಯಿಲೆ ಬೀಳದಂತೆ ನೋಡಿಕೊಳ್ಳತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ