Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರೋಗ್ಯಕರ, ರುಚಿಕರವಾದ ಮೆಂತೆಸೊಪ್ಪಿನ ರೊಟ್ಟಿ ಮಾಡುವುದು ಹೇಗೆ ಗೊತ್ತಾ...?

ಆರೋಗ್ಯಕರ, ರುಚಿಕರವಾದ ಮೆಂತೆಸೊಪ್ಪಿನ ರೊಟ್ಟಿ ಮಾಡುವುದು ಹೇಗೆ ಗೊತ್ತಾ...?
ಬೆಂಗಳೂರು , ಸೋಮವಾರ, 29 ಜನವರಿ 2018 (16:10 IST)
ಬೆಂಗಳೂರು: ಮೆಂತೆಸೊಪ್ಪಿನಲ್ಲಿ ಸಾಕಷ್ಟು ಪೌಷ್ಠಿಕಾಂಶಗಳಿವೆ. ಇದನ್ನು ತಿನ್ನುವುದರಿಂದ ಕಣ್ಣಿನ ಆರೋಗ್ಯವು ಚೆನ್ನಾಗಿರುತ್ತದೆ. ಸುಲಭದಲ್ಲಿ ತಯಾರಾಗುವ ಈ ರೊಟ್ಟಿ ರುಚಿಕರವಾಗಿರುವುದಲ್ಲದೇ, ದೇಹಕ್ಕೂ ಹಿತಕರ.

ಬೇಕಾಗಿರುವ ಸಾಮಾಗ್ರಿ:
ಮೆಂತೆ ಸೊಪ್ಪು ಒಂದು ಕಟ್ಟು, ಅಕ್ಕಿ ಹಿಟ್ಟು- ಅರ್ಧ ಕಪ್, ಜೀರಿಗೆ-1 ಚಮಚ, ಅರಿಶಿನ-ಸ್ವಲ್ಪ, ಈರುಳ್ಳಿ-1, ಹಸಿಮೆಣಸು-2, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-ಸ್ವಲ್ಪ.

ವಿಧಾನ:
ಮೊದಲಿಗೆ ಮೆಂತೆಸೊಪ್ಪನ್ನು ಚೆನ್ನಾಗಿ ತೊಳೆದು, ಚಿಕ್ಕದಾಗಿ ಕತ್ತರಿಸಿಕೊಳ್ಳಿ, ನಂತರ ಒಂದು ಪಾತ್ರೆಗೆ ಅಕ್ಕಿಹಿಟ್ಟು, ಜೀರಿಗೆ ಅರಿಶಿನ, ಕತ್ತರಿಸಿಟ್ಟುಕೊಂಡ ಈರುಳ್ಳಿ, ಮೆಣಸು, ಉಪ್ಪು, ಮೆಂತೆಸೊಪ್ಪು ಹಾಕಿ ಸ್ವಲ್ಪ ನೀರನ್ನು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಮಿಶ್ರಣಮಾಡಿಕೊಳ್ಳಿ. ನಂತರ ಕಾದ ಕಾವಲಿಯ ಮೇಲೆ ಎಣ್ಣೆ ಸವರಿ ಈ ಹಿಟ್ಟನ್ನು ಕೈಯಿಂದಲೇ ತಟ್ಟಿ. ಎರಡು ಕಡೆ ಚೆನ್ನಾಗಿ ಬೇಯಿಸಿದರೆ ಮೆಂತೆ ಸೊಪ್ಪಿನ ರೊಟ್ಟಿ ಸಿದ್ಧವಾಗುತ್ತೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಹಾಗೆ ಸಕ್ಕರೆ ಬದಲು ಬೆಲ್ಲ ಹಾಕಿಕೊಂಡು ಸೇವಿಸುವುದರಿಂದ ಈ ಲಾಭ ಗ್ಯಾರಂಟಿ!