Publish Date: Tue, 30 Jul 2019 (09:01 IST)
Updated Date: Tue, 30 Jul 2019 (09:03 IST)
ಬೆಂಗಳೂರು: ಸಂಗಾತಿ ಜತೆಗೆ ಸುಮಧುರ ಲೈಂಗಿಕ ಸಂಬಂಧವೇರ್ಪಡಬೇಕೆಂದರೆ ತಾಳ್ಮೆಯಿಂದ ಕೆಲವು ಸಮಯ ಕೊಡಲೇಬೇಕು! ಹೀಗಂತ ಅಧ್ಯಯನ ವರದಿಯೊಂದು ಹೇಳಿದೆ.
ಯಾವುದೇ ಲವ್ ರಿಲೇಷನ್ ಶಿಪ್ ನಲ್ಲಿ ಒಂದು ತಿಂಗಳು ಕಾದು ನಂತರ ದೈಹಿಕ ಸಂಬಂಧ ಬೆಳೆಸಿದರೆ ಅಂತಹ ಸಂಬಂಧ ಚೆನ್ನಾಗಿರುತ್ತದೆಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.50 ಮಂದಿ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಸಂಗಾತಿಯ ಇಷ್ಟ ಕಷ್ಟಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಮತ್ತು ಸಂಗಾತಿಯೂ ತನ್ನ ಜತೆಗೆ ಹೆಚ್ಚು ತೆರೆದುಕೊಳ್ಳಲು ಈ ಸಮಯ ಅಗತ್ಯವಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಮಂದಿ ಅಭಿಪ್ರಾಯಪಟ್ಟಿದ್ದಾರೆ.