ಬೆಂಗಳೂರು : ನಾವು ಕನ್ನಡಿಯ ಮುಂದೆ ಹೋಗಿ ಬಾಚಿದ ತಲೆಯನ್ನು ಮತ್ತೆ ಮತ್ತೆ ಬಾಚಿಕೊಳ್ಳುವುದರಿಂದ ಕೇವಲ ಸುಂದರವಾಗಿ ಕಾಣುವುದಷ್ಟೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಅನೇಕ ಉಪಯೋಗಗಳಿವೆ.
ಪ್ರಸ್ತುತ ಈ ಬ್ಯೂಸಿ ಲೈಫಿನಲ್ಲಿ ವಾರಕ್ಕೊಮ್ಮೆಯಾದರು ತಲೆಗೆ ಎಣ್ಣೆಯನ್ನು ಹಚ್ಚಿ ಬಾಚಿಕೊಳ್ಳುವುದರಿಂದ ಆರೋಗ್ಯವಾಗಿರುತ್ತೇವಂತೆ. ತಲೆಯನ್ನು ಬಾಚಿಕೊಳ್ಳುವಾಗ ಬಾಚಣಿಕೆ ತಲೆಕೂದಲು ಒಳಗೆ ಹೋಗುವುದರಿಂದ ಅಲ್ಲಿರುವ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ. ಇದರ ಜೊತೆಗೆ ಕೂದಲಿಗೆ ಬೇಕಾದ ಪೌಷ್ಟಿಕಾಂಶ, ಆಮ್ಲಜನಕ ದೊರೆಯುತ್ತದೆ. ಇದು ಕೂದಲಗಳನ್ನು ದೃಢವಾಗಿರುಸುವುದಕ್ಕೆ ಸಹಾಯವಾಗುತ್ತದೆ.
ಅಷ್ಟೇ ಅಲ್ಲಾ ಕೂದಲುಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ತಲೆಯನ್ನು ಹೆಚ್ಚಾಗಿ ಬಾಚಿಕೊಳ್ಳುವುದರಿಂದ ಡೆಡ್ ಸ್ಕಿನ್ ಸೆಲ್ಸ್, ಇತರೆ ನಿರ್ಜೀವ ಕಣಗಳು ಹೊರಹೋಗುತ್ತವೆ. ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ