Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ರೀತಿ ಎಲ್ಲಾ ಮಾಡಿದರೆ ಕೂದಲು ಉದುರುತ್ತದೆಯಂತೆ ಹುಷಾರು!

ಈ ರೀತಿ ಎಲ್ಲಾ ಮಾಡಿದರೆ ಕೂದಲು ಉದುರುತ್ತದೆಯಂತೆ ಹುಷಾರು!
ಬೆಂಗಳೂರು , ಮಂಗಳವಾರ, 13 ಮಾರ್ಚ್ 2018 (09:19 IST)
ಬೆಂಗಳೂರು: ಕೂದಲು ಉದುರುವ ಸಮಸ್ಯೆ ಹೆಂಗಸರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಾಣಿಸಿಕೊಳ್ಳುತ್ತದೆ. ನಾನಾ ಕಾರಣಗಳಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಕೆಲವೊಮ್ಮೆ ನಮಗೆ ಗೊತ್ತಿಲ್ಲದೇ ನಾವು ಮಾಡುವ ತಪ್ಪಿನಿಂದಾಗಿ ಕೂದಲಿಗೆ ಹಾನಿಯಾಗುವುದು.


ಕಂಡೀಷನರ್ ಅತೀಯಾಗಿ ಬಳಸುವುದರಿಂದ ಕೂದಲಿಗೆ ಹಾನಿಯಾಗುತ್ತದೆ.

ಬೇರೆಯವರ ಬಾಚಣಿಕೆ ಬಳಸಬೇಡಿ. ನಿಮ್ಮ ಬಾಚಣಿಕೆಯನ್ನು ಶುದ್ಧವಾಗಿ ಇಟ್ಟುಕೊಳ್ಳಿ.

ತಲೆಗೆ ಬಿಸಿ ನೀರು ಒಳ್ಳೆಯದಲ್ಲ. ಕೆಲವರಿಗೆ ತಣ್ಣೀರಿನಲ್ಲಿ ಸ್ನಾನ ಮಾಡಿ ಅಭ್ಯಾಸ ಇರುವುದಿಲ್ಲ. ಅಂಥವರು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.

ದಿನಾ ತಲೆಸ್ನಾನ ಮಾಡಿದರೆ ಕೂದಲು ಉದುರುವುದು. ವಾರದಲ್ಲಿ ಎರಡರಿಂದ ಮೂರು ಬಾರಿಯಷ್ಟೇ ತಲೆ ಸ್ನಾನ ಮಾಡುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮನೆಯಲ್ಲಿ ಉಪ್ಪು ಇದೆಯಾ...? ಹಾಗಾದ್ರೆ ಅದನ್ನು ಬಳಸಿ ಹೀಗೆಲ್ಲಾ ಮಾಡಿ!