ನವದೆಹಲಿ: ಈ ಬಾರಿ ಐಪಿಎಲ್ ನಲ್ಲಿ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿಟ್ಟು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿದ್ದಾರೆ. ಒಂದು ರೀತಿಯಲ್ಲಿ ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಅವರೇ ಆಧಾರ.
ಟಿ20 ಕ್ರಿಕೆಟ್ ನಲ್ಲಿ ರಾಹುಲ್ ಅಪ್ರತಿಮ ಆಟಗಾರ. ದಾಖಲೆಗಳೇ ಹೇಳುವಂತೆ ಅವರು ಸರಾಸರಿಯಲ್ಲಿ ವಿರಾಟ್ ಕೊಹ್ಲಿಯನ್ನೂ ಮೀರಿಸುತ್ತಾರೆ. ಟಿ20 ಮಾದರಿಯಲ್ಲಿ ಶತಕ ಗಳಿಸಿದ ಕೆಲವೇ ಕೆಲವು ಆಟಗಾರರಲ್ಲಿ ರಾಹುಲ್ ಕೂಡಾ ಒಬ್ಬರು.
ಟೀಂ ಇಂಡಿಯಾದಲ್ಲಿ ರಾಹುಲ್ ಗೆ ಯಾವತ್ತೂ ತಮಗೆ ಬೇಕಾದ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ ಐಪಿಎಲ್ ನಲ್ಲಿ ತಂಡಕ್ಕೆ ಅವರೇ ಟ್ರಂಪ್ ಕಾರ್ಡ್. ಬ್ಯಾಟಿಂಗ್ ಜತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯೂ ಅವರ ಹೆಗಲಿಗೇರಲಿದೆ. ಮೇಲಾಗಿ ನಾಯಕ ರವಿಚಂದ್ರನ್ ಅಶ್ವಿನ್ ಜತೆಗೆ ಅವರಿಗೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಈ ಐಪಿಎಲ್ ನಲ್ಲಿ ರಾಹುಲ್ ಗೆ ಸಿಡಿಯುವ ಎಲ್ಲಾ ಅವಕಾಶಗಳಿವೆ. ಸಿಡಿಯಬೇಕು ಅಷ್ಟೇ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ