ಬೆಂಗಳೂರು: ಗೊರಕೆ ಹೊಡೆದು ನಿದ್ರಿಸುವ ಅಭ್ಯಾಸ ಹಲವರಲ್ಲಿದೆ. ಆದರೆ ಈ ಗೊರಕೆ ಎಂತೆಂಥಾ ಆರೋಗ್ಯದ ಅಪಾಯ ತಂದೊಡ್ಡುತ್ತದೆ ಗೊತ್ತಾ?
ಗೊರಕೆ ಎನ್ನುವುದು ಉಸಿರಾಟ ಪ್ರಕ್ರಿಯೆಯ ಒಂದು ಅಸಹಜತೆ. ಸಣ್ಣ ಮಟ್ಟಿನ ಗೊರಕೆಯಿಂದ ಸಮಸ್ಯೆಯಿಲ್ಲ. ಆದರೆ ಇದುವೇ ವಿಪರೀತಕ್ಕೆ ಹೋದರೆ ಹಲವು ಆರೋಗ್ಯ ಸಮಸ್ಯೆಯ ಲಕ್ಷಣಗಳಾಗಿ ಪರಿಗಣಿಸಬೇಕಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಗೊರಕೆ ಹೆಚ್ಚು ಹೊಡೆಯುತ್ತಿದ್ದರೆ ಅಂತಹವರ ಆಯಸ್ಸು ಕಡಿಮೆಯಿರುತ್ತದೆ ಎನ್ನಲಾಗುತ್ತದೆ. ಅದೇ ರೀತಿ ರಕ್ತದೊತ್ತಡ, ಮಧುಮೇಹ, ಖಿನ್ನತೆ, ಪಕ್ಷಪಾತ, ಹೃದಯ ಸಮಸ್ಯೆ ಇಂತಹ ಹಲವು ಆರೋಗ್ಯ ಸಮಸ್ಯೆಗೆ ಇದು ಕಾರಣವಾಗುತ್ತದಂತೆ. ಹಾಗಾಗಿ ಗೊರಕೆ ಹೊಡೆಯುವವರು ಇದಕ್ಕೆ ತಕ್ಕ ಚಿಕಿತ್ಸೆ ಪಡೆಯಬಹುದು ಎನ್ನುವುದು ತಜ್ಞರ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.