Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಾಲುಸೋರೆಕಾಯಿ ದಿಢೀರ್ ಹಲ್ವಾ..!!

ಹಾಲುಸೋರೆಕಾಯಿ ದಿಢೀರ್ ಹಲ್ವಾ..!!
ಬೆಂಗಳೂರು , ಶುಕ್ರವಾರ, 21 ಸೆಪ್ಟಂಬರ್ 2018 (17:33 IST)
ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಏನಾದರೂ ಸಿಹಿ ತಿಂಡಿಯನ್ನು ಮಾಡಲು ನೀವು ಬಯಸಿದರೆ ಅಥವಾ ನಿಮಗೇ ತಕ್ಷಣವೇ ಏನಾದರೂ ಸಿಹಿ ತಿಂಡಿಯನ್ನು ತಿನ್ನಬೇಕು ಎನಿಸಿದರೆ ಈ ದಿಢೀರ್ ಹಲ್ವಾವನ್ನು ಮಾಡಬಹುದಾಗಿದೆ.

ಹಾಲುಸೋರೆಕಾಯಿ ಒಂದು ಲಭ್ಯವಿದ್ದರೆ ಉಳಿದ ಪದಾರ್ಥಗಳೆಲ್ಲಾ ಸಾಮಾನ್ಯವಾಗಿ ಮನೆಯಲ್ಲಿರುವಂತಹುದೇ ಆಗಿದೆ. ಅತಿ ಶೀಘ್ರವಾಗಿ ಮತ್ತು ಕಡಿಮೆ ಸಾಮಗ್ರಿಗಳಲ್ಲಿ ನೀವು ಈ ರುಚಿಯಾದ ಹಲ್ವಾವನ್ನು ಮಾಡಿಕೊಳ್ಳಬಹುದು. ನಿಮಗೆ ಇಷ್ಟವಾಗುವ ಡ್ರೈ ಫ್ರೂಟ್ಸ್‌ಗಳನ್ನು ಇದರಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಈ ಹಾಲುಸೋರೆಕಾಯಿ ಹಲ್ವಾ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಲೇಖನವನ್ನು ಓದಿ.
 
ಬೇಕಾಗುವ ಸಾಮಗ್ರಿಗಳು:
 
ಹಾಲುಸೋರೆಕಾಯಿ - 1
ತುಪ್ಪ - 4-5 ಚಮಚ
ಸಕ್ಕರೆ - 3/4 ಕಪ್
ಹಾಲು - 1/4 ಕಪ್
ಏಲಕ್ಕಿ ಪುಡಿ - 1 ಚಮಚ
ಗೋಡಂಬಿ - 8-10
ಬಾದಾಮಿ - 8-10
 
ಮಾಡುವ ವಿಧಾನ:
 
ಒಂದು ಪ್ಯಾನ್ ತೆಗೆದುಕೊಂಡು ತುರಿದ ಹಾಲುಸೋರೆಕಾಯಿ ಮತ್ತು ಹಾಲನ್ನು ಹಾಕಿ ಚೆನ್ನಾಗಿ ಬೇಯಿಸಿ. ಇದು ಚೆನ್ನಾಗಿ ಬೆಂದು ಹಾಲು ದಪ್ಪವಾಗುತ್ತಾ ಬಂದಂತೆ ಅದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ 4 ಚಮಚ ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣ ಚೆನ್ನಾಗಿ ಪಾಕ ಬಂದು ಪ್ಯಾನ್‌ನ ತಳವನ್ನು ಬಿಟ್ಟಾಗ ಸ್ಟೌ ಆಫ್ ಮಾಡಿ ಅದಕ್ಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಬಾದಾಮಿ ಮತ್ತು ಗೋಡಂಬಿಯ ಚೂರುಗಳನ್ನು ಮಿಕ್ಸ್ ಮಾಡಿಕೊಂಡರೆ ಹಾಲುಸೋರೆಕಾಯಿ ಹಲ್ವಾ ರೆಡಿಯಾಗುತ್ತದೆ. ನೀವೂ ಇದನ್ನೊಮ್ಮೆ ಪ್ರಯತ್ನಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಕರವಾದ ಪನ್ನೀರ್ ಗ್ರೇವಿ