ಬೆಂಗಳೂರು: ಮಲಗಿದ ತಕ್ಷಣ ಕೆಲವೊಮ್ಮೆ ನಿದ್ರೆ ಬಾರದೇ ಹಾಸಿಗೆಯಲ್ಲಿ ಹೊರಳಾಡುತ್ತಾ ಕಾಲ ಕಳೆಯಬೇಕಾಗುತ್ತದೆ. ಈ ಸಮಸ್ಯೆ ಪರಿಹಾರಕ್ಕೆ ಕೆಲವು ಟಿಪ್ಸ್ ಇಲ್ಲಿದೆ ನೋಡಿ.
ಒಂದೇ ಭಂಗಿಯಲ್ಲಿ ಮಲಗಿ
ಪ್ರತಿನಿತ್ಯ ಒಂದೇ ಭಂಗಿಯಲ್ಲಿ ಮಲಗಿ ನಿದ್ರಿಸುವುದನ್ನು ಅಭ್ಯಾಸ ಮಾಡಿ. ಇದರಿಂದ ನಿಮ್ಮ ದೇಹ, ಮನಸ್ಸು ಇದಕ್ಕೆ ಒಗ್ಗಿಕೊಳ್ಳುತ್ತದೆ.
ಬರೆಯುತ್ತಾ ಕೂರಿ
ಒಂದು ಡೈರಿ ತೆಗೆದುಕೊಂಡು ಇಂದು ಏನೇನು ಮಾಡಿದೆ, ನಿಮ್ಮ ಸುತ್ತಮುತ್ತಲಿನ ವಿಚಾರಗಳ ಬಗ್ಗೆ ಬರೆಯುತ್ತಾ ಕೂತರೆ ತಾನಾಗೇ ತೂಕಡಿಸುತ್ತದೆ.
ಮಲಗುವ ಮೊದಲು ವ್ಯಾಯಾಮ ಬೇಡ
ಪ್ರತಿನಿತ್ಯ ದೈಹಿಕ ವ್ಯಾಯಾಮ ದೇಹಕ್ಕೆ ಒಳ್ಳೆಯದು. ಆದರೆ ಮಲಗುವ ಮೊದಲು ವ್ಯಾಯಾಮ ಮಾಡಬೇಡಿ. ಇದರಿಂದ ನಿದ್ರೆ ಓಡಿ ಹೋಗಬಹುದು.
ಹಗಲು ನಿದ್ರಿಸಬೇಡಿ
ಕೆಲವರಿಗೆ ಹಗಲು ಮಲಗಿ ನಿದ್ರಿಸುವ ಅಭ್ಯಾಸವಿರುತ್ತದೆ. ಇದನ್ನು ಬಿಟ್ಟರೆ ರಾತ್ರಿ ತಾನಾಗಿಯೇ ನಿದ್ರೆ ಬರುತ್ತದೆ.
ಕಾಫಿ, ಟೀ ಬೇಡ
ಮಲಗುವ ಮೊದಲು ಕಫೈನ್ ಅಂಶವಿರುವ ಪಾನೀಯ, ಮದ್ಯಪಾನ ಮಾಡಬೇಡಿ. ಇದು ನಿದ್ರೆ ಹಾಳು ಮಾಡುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.