Publish Date: Fri, 18 Sep 2020 (07:01 IST)
Updated Date: Fri, 18 Sep 2020 (07:03 IST)
ಬೆಂಗಳೂರು : ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ. ಆದರೆ ಕೆಲವೊಂದು ಸಮಸ್ಯೆಗಳು ಜೀವನದಲ್ಲಿ ಜಿಗುಪ್ಸೆ ಬರುವಂತೆ ಮಾಡಿಬಿಡುತ್ತವೆ. ಆದಕಾರಣ ಈ ರೀತಿಯಾಗಿ ಹರಕೆ ಕಟ್ಟಿಕೊಂಡು ಸಮಸ್ಯೆಯನ್ನು ನಿವಾರಿಸಿ.
ಸಮಸ್ಯೆಗಳು ಎದುರಾದಾಗ ಮನೆ ದೇವರ ಹೆಸರಿನಲ್ಲಿ ಹೀಗೆ ಹರಕೆ ಕಟ್ಟಿಕೊಳ್ಳಿ. ಒಂದು ಬಿಳಿ ಬಟ್ಟೆಯ ತುಂಡನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಅರಿಶಿನದಲ್ಲಿ ಅದ್ದಿ ದೇವರ ಮುಂದೆ ಇರಿಸಿ ಮನೆ ದೇವರ ಪೂಜೆ ಮಾಡಿ ನಂತರ ಒಂದೆರಡು ನಾಣ್ಯಗಳನ್ನು ಆ ಬಟ್ಟೆಯಲ್ಲಿ ಹಾಕಿ ನಿಮ್ಮ ಕಷ್ಟಗಳು ಪರಿಹಾರವಾಗಬೇಕೆಂದು ಬೇಡಿಕೊಳ್ಳಿ. ನಾಲ್ಕು ವಾರಗಳ ನಂತರ ಅದನ್ನು ಹರಿಯುವ ನೀರಿಗೆ ಹಾಕಿ ಅಥವಾ ಎಕ್ಕ ಗಿಡಕ್ಕೆ ಕಟ್ಟಿ.