Publish Date: Thu, 17 Sep 2020 (09:54 IST)
Updated Date: Thu, 17 Sep 2020 (10:00 IST)
ಬೆಂಗಳೂರು : ಕೆಲವರು ತುಂಬಾ ಹೆಚ್ಚಾಗಿ ಬೆವರುತ್ತಾರೆ, ಇದರಿಂದ ಅವರ ದೇಹದಿಂದ ದುರ್ಗಂಧ ಹೊರಹೊಮ್ಮುತ್ತದೆ. ಇದರಿಂದ ಅವರು ಮುಜುಗರಕ್ಕೊಳಗಾಗುತ್ತಾರೆ. ಈ ಬೆವರಿನಿಂದ ಮುಕ್ತಿ ಹೊಂದಲು ಹೀಗೆ ಮಾಡಿ.
ಹೆಸರುಕಾಳನ್ನು ಹುರಿದುಕೊಂಡು ಅದನ್ನು ಪುಡಿ ಮಾಡಿ ನೀರಿನಲ್ಲಿ ಕಲಸಿ ಹೆಚ್ಚು ಬೆವರು ಬರುವ ಸ್ಥಳದಲ್ಲಿ ಹಚ್ಚಿ. ಒಂದು ಗಂಟೆ ಬಳಿಕ ವಾಶ್ ಮಾಡಿ. ಹೀಗೆ ಮಾಡುತ್ತಾ ಬಂದರೆ ಹೆಚ್ಚು ಬೆವರು ಬರುವುದು ಕಡಿಮೆಯಾಗುತ್ತದೆ. ಹಾಗೇ ಬೆವರಿನ ವಾಸನೆ ನಿವಾರಣೆಯಾಗುತ್ತದೆ.