ಬೆಂಗಳೂರು: ಹಗಲು ಹೊತ್ತು ತೂಕಡಿಸುತ್ತಿದ್ದರೆ ಕೊಂಚ ಹೊತ್ತು ಮಲಗಿ ನಿದ್ರೆ ಮಾಡಿದರೆ ಯಾರಾದರೂ ಸೋಮಾರಿ ಎಂದುಕೊಳ್ಳಬಹುದು ಎಂದು ಭಯಪಡುತ್ತಿದ್ದೀರಾ?
ಹಾಗಿದ್ದರೆ ಆತಂಕ ಬೇಡ. ತೂಕಡಿಕೆ ಬಂದಾಗ ಕೊಂಚ ಹೊತ್ತು ನಿದ್ರೆ ಮಾಡುವುದು ಮೆದುಳಿಗೆ ಒಳ್ಳೆಯದಂತೆ. ಹಾಗಂತ ಬ್ರಿಸ್ಟೋಲ್ ನ ಅಧ್ಯಯನವೊಂದು ಬಹಿರಂಗಪಡಿಸಿದೆ.
ಆಗಾಗ ಸಣ್ಣ ನಿದ್ರೆ ಮಾಡುವುದರಿಂದ ಮೆದುಳು ಚುರುಕಾಗುತ್ತದೆ. ಇದರಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಾಗುತ್ತೀರಿ ಎಂದು ಅಧ್ಯಯನ ವರದಿ ಹೇಳಿದೆ. ಸಾವಿರಾರು ಮಂದಿಯ ಮೇಲೆ ಸಮೀಕ್ಷೆ ನಡೆಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.