Publish Date: Wed, 29 Apr 2020 (09:03 IST)
Updated Date: Wed, 29 Apr 2020 (09:05 IST)
ಬೆಂಗಳೂರು: ಪ್ರತಿನಿತ್ಯ ಬೆಳಿಗ್ಗೆ ಸ್ನಾನ ಮಾಡುವುದು ಸಾಧಾರಣವಾಗಿ ಎಲ್ಲರೂ ಮಾಡುವ ಆರೋಗ್ಯಕರ ಅಭ್ಯಾಸ. ಆದರೆ ಏಳುವಾಗಲೇ ವಿನಾಕಾರಣ ಕೈಕಾಲು, ಕೀಲು ನೋವು ಎಂದು ಬಳಲುವವರು ಸ್ನಾನ ಮಾಡುವುದರ ಜತೆಗೆ ಈ ಪುಟ್ಟ ಕೆಲಸ ಮಾಡಿ ನೋಡಿ.
ಪ್ರತಿನಿತ್ಯ ಮುಂಜಾವಿನ ವೇಳೆ ಸ್ನಾನ ಮಾಡುವಾಗ ಬಿಸಿ ನೀರಿಗೆ ಕೊಂಚ ಉಪ್ಪು ಸೇರಿಸಿ ಸ್ನಾನ ಮಾಡಿ. ಇದರಿಂದ ಕಾಲು, ಕೈ, ಕೀಲು ನೋವು, ಮಂಡಿ ನೋವು ಇತ್ಯಾದಿ ಸಮಸ್ಯೆಗಳು ದೂರವಾಗುತ್ತದೆ. ಆಟವಾಡಿ ಕೈ ಕಾಲಿನ ಸ್ನಾಯು ನೋವಾಗಿದ್ದರೂ ಹೀಗೆ ಮಾಡಬಹುದು. ಅಷ್ಟೇ ಅಲ್ಲದೆ, ತಲೆಹೊಟ್ಟಿನ ಸಮಸ್ಯೆಯಿದ್ದರೂ ಈ ರೀತಿ ಬಿಸಿ ನೀರಿಗೆ ಉಪ್ಪು ಹಾಕಿ ಸ್ನಾನ ಮಾಡುವುದು ಉತ್ತಮ ಫಲಿತಾಂಶ ಕೊಡುತ್ತದೆ.