ಬೆಂಗಳೂರು: ಸೂಕ್ತ ಗರ್ಭನಿರೋಧಕ ಸಾಧನ ಅಳವಡಿಸದೇ ಸೇರಿದ ಮೇಲೆ ಮಹಿಳೆಯರು ಗರ್ಭಿಣಿಯಾದರೆ ಎಂಬ ಭಯದಲ್ಲಿರುತ್ತಾರೆ. ಒಂದು ವೇಳೆ ತನಗೆ ಮಕ್ಕಳು ಬೇಡವೆಂದಿದ್ದರೆ ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?
ಗರ್ಭನಿರೋಧಕವಿಲ್ಲದೇ ದೈಹಿಕ ಸಂಪರ್ಕ ಏರ್ಪಡಿಸಿದ 72 ಗಂಟೆಯೊಳಗೆ ಸೂಕ್ತ ಗುಳಿಗೆ ಸೇವಿಸಿದಲ್ಲಿ ಬೇಡದ ಗರ್ಭಧಾರಣೆ ತಡೆಯಬಹುದು. ಆದರೆ ಇದನ್ನೂ ಮೀರಿದ ಮೇಲೆ ಔಷಧ ತೆಗೆದುಕೊಳ್ಳುವುದರಿಂದ ಪ್ರಯೋಜನವಾಗದು.
ಅಂತಹ ಸಂದರ್ಭದಲ್ಲಿ ದೈಹಿಕ ಸಂಪರ್ಕ ನಡೆಸಿದ ಮೂರು ವಾರಗಳ ಬಳಿಕ ಪ್ರೆಗ್ನೆನ್ಸಿ ಕಿಟ್ ಮೂಲಕ ಪರೀಕ್ಷೆ ನಡೆಸಿ ಸಕಾರಾತ್ಮಕ ಫಲಿತಾಂಶ ಬಂದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ. ತಡವಾದಷ್ಟು ನಿಮಗೇ ತೊಂದರೆ.