ಬೆಂಗಳೂರು: ಬಹುತೇಕ ಮಂದಿ ಶೀಘ್ರಸ್ಖಲನ, ಉದ್ರೇಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವೊಮ್ಮೆ ಲೈಂಗಿಕ ಜ್ಞಾನದ ಕೊರತೆಯಿಂದ ಅಥವಾ ಸರಿಯಾದ ಕ್ರಮದಲ್ಲಿ ಲೈಂಗಿಕ ಕ್ರಿಯೆ ನಡೆಸದೇ ಇರುವುದು ಕಾರಣವಿರಬಹುದು.
ಕೆಲವರು ಕ್ಲೈಮ್ಯಾಕ್ಸ್ ಹಂತದ ಬಗ್ಗೆಯೇ ಹೆಚ್ಚು ಗಮನಕೊಡುತ್ತಾರೆ. ಆದರೆ ಲೈಂಗಿಕ ಕ್ರಿಯೆಯಲ್ಲಿ ರಮಿಸುವಿಕೆಯೂ ಮುಖ್ಯವಾಗುತ್ತದೆ. ಪರಸ್ಪರ ಇದರಿಂದ ಭಾವನಾತ್ಮಕವಾಗಿಯೂ ಹೆಚ್ಚು ಹತ್ತಿರವಾಗುತ್ತಾರೆ. ಮಾತ್ರವಲ್ಲ, ಉದ್ರೇಕ ಸ್ಥಿತಿಗೆ ತಲುಪಲು ಸಾಧ್ಯವಾಗುತ್ತದೆ.
ಒಂದು ವೇಳೆ ಸಾಕಷ್ಟು ಹೊತ್ತು ಫೋರ್ ಪ್ಲೇ ಮಾಡಿದ ಮೇಲೂ ಈ ಸಮಸ್ಯೆಗಳು ಕಾಣಿಸಿಕೊಂಡರೆ ಅದಕ್ಕೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.