Publish Date: Mon, 16 Sep 2019 (08:42 IST)
Updated Date: Mon, 16 Sep 2019 (08:44 IST)
ಬೆಂಗಳೂರು: ಹದಿಹರೆಯದ ವಯಸ್ಸಲ್ಲಿ ಕಾಮದ ಬಯಕೆ ಮೂಡುವುದ ಸಹಜ. ಆ ಸಂದರ್ಭದಲ್ಲಿ ಯಾವುದೋ ಕ್ಷಣದಲ್ಲಿ ಅಕಸ್ಮಾತ್ತಾಗಿ ಹೆಣ್ಣಿನ ಸಹವಾಸ ಮಾಡಿದ ಮೇಲೆ ಅದು ಮತ್ತೆ ಮತ್ತೆ ಮಾಡಬೇಕೆನಿಸುವುದು ಸಹಜ.
ಇದೇ ಬಯಕೆ ಅತಿಯಾದರೆ ಬೇರೆ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅಲ್ಲದೆ, ಅದೇ ನೆನಪು ಕಾಡುತ್ತಿದ್ದರೆ ಲೈಂಗಿಕವಾಗಿ ಉದ್ರೇಕವಾದಾಗ ಆತ್ಮರತಿಯೂ ತೃಪ್ತಿಕೊಡದ ಪರಿಸ್ಥಿತಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಮನಸ್ಸನ್ನು ಬೇರೆ ಕಡೆಗೆ ಗಮನ ಹಾರಿಸಲು ಬೇರೆ ಹವ್ಯಾಸ ಬೆಳೆಸಿಕೊಳ್ಳಬೇಕು. ಲೈಂಗಿಕ ತೃಪ್ತಿಗಾಗಿ ಆತ್ಮರತಿಯನ್ನು ಚಟವಾಗಿಸದೇ ತೀರಾ ಲೈಂಗಿಕವಾಗಿ ಉದ್ರೇಕವಾದಾಗ ಮಾತ್ರ ಮಾಡಿ ತೃಪ್ತಿಪಟ್ಟುಕೊಳ್ಳಬೇಕು.