Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಹುಪಯೋಗಿ ಕಲ್ಲಂಗಡಿ ಹಣ್ಣಿನ ಬೀಜ

ಬಹುಪಯೋಗಿ ಕಲ್ಲಂಗಡಿ ಹಣ್ಣಿನ ಬೀಜ
ಬೆಂಗಳೂರು , ಗುರುವಾರ, 12 ಜುಲೈ 2018 (17:11 IST)
ಅತಿ ಹೆಚ್ಚಿನ ನೀರಿನ ಅಂಶ ಹೊಂದಿರುವ ಕಲ್ಲಂಗಡಿ ಹಣ್ಣು ವಿಟಮಿನ್‌ ಎ, ಬಿ1, ಬಿ6, ವಿಟಮಿನ್‌ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂಗಳನ್ನು ಹೊಂದಿದೆ. ಕೇವಲ ಹಣ್ಣು ಮಾತ್ರ ಅಲ್ಲ ಇದರ ಬೀಜಗಳು ಸಹ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.
- ಕಲ್ಲಂಗಡಿ ಹಣ್ಣಿನ ಬೀಜವನ್ನು ಹಾಲು ಅಥವಾ ನೀರಿನ ಜೊತೆ ಅರಿದು ಸೇವನೆ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
 
- ಕಲ್ಲಂಗಡಿ ಹಣ್ಣಿನ ಬೀಜದಲ್ಲಿರುವ ಲೀಕೊಪಿನ್ ಎಂಬ ಉತ್ಕರ್ಷಣ ನಿರೋಧಕವು ಪುರಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ.
 
- ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಆಂಟಿ ಆಕ್ಸಿಡೆಂಟ್‌ಗಳಿವೆ ಯತೇಚ್ಛವಾಗಿರುವುದರಿಂದ ಇದು ದೇಹದಲ್ಲಿನ ಪ್ರೀರಾಡಿಕಲ್ಸ್‌ ತೊಂದರೆಯಿಂದ ರಕ್ಷಿಸುತ್ತವೆ.
 
- ಕಲ್ಲಂಗಡಿ ಹಣ್ಣಿನ ಬೀಜದಲ್ಲಿರುವ ಅಮೈನೋ ಆಮ್ಲವು ಅರ್ಜಿನೈನ್ ಆಗಿ ಪರಿವರ್ತನೆ ಆಗುತ್ತದೆ ಇದು ದೇಹದ ಕೊಬ್ಬನ್ನು ಕಡಿಮೆಮಾಡುತ್ತದೆ.
 
- ಕಲ್ಲಂಗಡಿ ಹಣ್ಣಿನ ಬೀಜದಲ್ಲಿರುವ ಮೆಗ್ನೇಶಿಯಂ ಉತ್ತಮ ಪ್ರಮಾಣದಲ್ಲಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
 
- ಮುಖದ ಮೇಲಾಗುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ ತೆಗೆದ ಎಣ್ಣೆಯನ್ನು ಲೇಪಿಸಬೇಕು.
 
- ಕಲ್ಲಂಗಡಿ ಹಣ್ಣಿನ ಬೀಜದಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹಕರಿಸುತ್ತದೆ.
 
- ಕಲ್ಲಂಗಡಿ ಹಣ್ಣಿನ ಬೀಜ ವಯಸ್ಸಾಗುತ್ತಿರುವವರಲ್ಲಿನ ವೃದ್ದಾಪ್ಯ ಸಮಸ್ಯೆಗಳನ್ನು ಕಡಿಮೆ ಮಾಡಿ ಯೌವ್ವನವಾಗಿ ಕಾಣಿಸುವಂತೆ ಮಾಡುತ್ತದೆ.
 
- ಕಲ್ಲಂಗಡಿ ಹಣ್ಣಿನ ಬೀಜವನ್ನು ಹುರಿದು ಪುಡಿ ಮಾಡಿ ತಲೆ ಕೂದಲಿಗೆ ಹಚ್ಚುವುದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ.
 
- ಇದು ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತವೆ
 
- ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿರುವ ಪಾಲಿ, ಮೋನೋ ಅನ್‌ಸ್ಯಾಚ್ಯುರೇಟೆಡ್ ಫ್ಯಾಟಿ ಆಮ್ಲಗಳು ಕೊಲೆಸ್ಟರಾಲನ್ನು ಕಡಿಮೆ ಮಾಡುತ್ತದೆ
 
- ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿರುವ ಪಾಲಿ, ಮೋನೋ ಅನ್‌ಸ್ಯಾಚ್ಯುರೇಟೆಡ್ ಫ್ಯಾಟಿ ಆಮ್ಲಗಳು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
 
- ಈ ಬೀಜದ ಬಳಕೆಯಿಂದ ಹಲ್ಲು ಹಾಗೂ ವಸಡುಗಳು ಬಲವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಲಾಬಿ ಹೂವಿನ ಚಹಾದ ಲಾಭಗಳು