ಆಹಾರ ಕ್ರಮದಲ್ಲಿ ಮೊಸರನ್ನಕ್ಕೆ ವಿಶೇಷ ಸ್ಥಾನವಿದೆ. ಕೆಲವರು ಇದನ್ನು ಇಷ್ಟುಟ್ಟಿ ತಿಂದರೆ ಇನ್ನೂ ಕೆಲವರು ಮೂಗು ಮುರಿಯುತ್ತಾರೆ. ಪ್ರತಿನಿತ್ಯ ಮೊಸರಾನ್ನ ಸೇವನೆ ಮಾಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ಕೆಲಸ ಮಾಡುವುದು ಮಾತ್ರವಲ್ಲದೆ ಸಂಪೂರ್ಣ ಆರೋಗ್ಯಕ್ಕೆ ಇದು ಒಳ್ಳೆಯದು.
- ಇದರ ಸೇವನೆಯಿಂದ ಹೊಟ್ಟೆಯ ಸಮಸ್ಯೆ ಅಥವಾ ಅಜೀರ್ಣ ಕಡಿಮೆಯಾಗುತ್ತದೆ.
- ಮೊಸರನ್ನದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಇರುವುದರಿಂದ ಇದರ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಮತ್ತು ನೋವು ನಿವಾರಣೆಯಾಗಲು ಸಹ ಸಹಕಾರಿ.
- ಮೊಸರು ಸೇವನೆ ಮಾಡಿದರಿಂದ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
- ಮೊಸರಿನಲ್ಲಿ ಇಮ್ಯೂನಿಟಿಯನ್ನು ಬೂಸ್ಟ್ ಮಾಡುವ ಅಂಶಗಳು ಹಾಗೂ ಆಂಟಿಆಕ್ಸಿಡೆಂಟ್‌ಗಳಿರುವುದರಿಂದ ಜ್ಚರ ಬಂದಾಗ ಇದರ ಸೇವನೆ ಮಾಡಿದರೆ ಒಳ್ಳೆಯದು.
- ಮೊಸರಿನಲ್ಲಿ ಆ್ಯಂಟಿಆಕ್ಸಿಡೆಂಟ್, ಪ್ರೋಬಯಾಟಿಕ್‌ಗಳು ಮತ್ತು ಒಳ್ಳೆಯ ಗುಣಮಟ್ಟದ ಕೊಬ್ಬು ಇರುವುದರಿಂದ ತೂಕ ಇಳಿಕೆಗೆ ಒಳ್ಳೆಯದು.
- ಇದು ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ನೆರವಾಗುತ್ತದೆ.
- ಇದರಲ್ಲಿ ಉನ್ನತ ಮಟ್ಟದ ಕಾರ್ಬ್ರೋಹೈಡ್ರೇಟ್ಸ್ ಮತ್ತು ಪ್ರೋಟೀನ್ ಇರುವದರಿಂದ ಇದು ಆರೋಗ್ಯಕ್ಕೆ ತುಂಬ ಒಳ್ಳೆಯದು.
- ಅತಿ ಖಾರದ ಆಹಾರ ತಿಂದಾಗ ಉಂಟಾಗುವಂತಹ ಉರಿ ಮತ್ತು ಕಿರಿಕಿರಿಯನ್ನು ಒಂದು ಚಮಚ ಮೊಸರಿನ ಸೇವನೆಯಿಂದ ಕಡಿಮೆ ಮಾಡಬಹುದು.
- ಮೊಸರನ್ನ ಜೀರ್ಣಿಸಿಕೊಳ್ಳಲು ಸುಲಭವಾಗಿರುವ ಕಾರಣ ಎಲ್ಲಾ ವಯಸ್ಸಿನವರೂ ಇದನ್ನು ಯಾವುದೇ ಅಳುಕಿಲ್ಲದೇ ಸೇವಿಸಬಹುದು.
- ಮೊಸರನ್ನ ನಿಮ್ಮ ದೇಹದ ಉಷ್ಣವನ್ನು ಕಡಿಮೆ ಮಾಡುತ್ತದೆ.
- ಇದರಲ್ಲಿ ಹೆಚ್ಚು ಕ್ಯಾಲ್ಸಿಯಂ, ಉತ್ತಮ ಕೊಬ್ಬು ಮತ್ತು ಹೆಚ್ಚಿನ ಪ್ರೋಟೀನ್ ಇರುವದರಿಂದ ಇದು ಆರೋಗ್ಯಕ್ಕೆ ತುಂಬ ಒಳ್ಳೆಯದು.
* ಮೊಸರನ್ನ ತಯಾರಿಸುವುದು ಹೇಗೆ?
ಬೇಕಾಗುವ ಸಾಮಗ್ರಿಗಳು
ಅನ್ನ 1 ಕಪ್
ದಾಳಿಂಬೆ ಬೀಜ 1/2 ಕಪ್
ಗೇರು ಬೀಜ 2 ಚಮಚ
ಎಣ್ಣೆ 2 ಚಮಚ
ಹಸಿಮೆಣಸಿನ ಕಾಯಿ 3-4
ಕರಿಬೇವಿನ ಎಲೆ
ಗಟ್ಟಿ ಮೊಸರು 2 ಕಪ್
ಸಾಸಿವೆ 1 ಚಮಚ
ಜೀರಿಗೆ 1 ಚಮಚ
ಉದ್ದಿನಬೇಳೆ 1 ಚಮಚ
ಉಪ್ಪು
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಜೀರಿಗೆ, ಸಾಸಿವೆ ,ಉದ್ದಿನಬೇಳೆ, ಕಡಲೇಬೇಳೆ ಹಾಕಿ ಬಿಸಿ ಮಾಡಿ.
ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಅದನ್ನು ಅನ್ನದ ಮೇಲೆ ಹಾಕಿ ಹಸಿ ಮೆಣಸು ಹಾಕಿ ಗೇರುಬೀಜಗಳನ್ನು ಸೇರಿಸಿ . ಉಪ್ಪು ಹಾಕಿ ಕಲಸಿ ಕೊನೆಯಲ್ಲಿ ಮೊಸರು ಸೇರಿಸಿ ಕಲಸಿ ತಿನ್ನಲು ಬಡಿಸಿರಿ.