Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರೋಗ್ಯಕರ ಬೆಟ್ಟದ ನೆಲ್ಲಿಕಾಯಿಯ ಲಾಭಗಳು

ಆರೋಗ್ಯಕರ ಬೆಟ್ಟದ ನೆಲ್ಲಿಕಾಯಿಯ ಲಾಭಗಳು
ಬೆಂಗಳೂರು , ಗುರುವಾರ, 12 ಜುಲೈ 2018 (14:44 IST)
ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿರುತ್ತದೆ. ನಮ್ಮನ್ನು ಬಾಧಿಸುವ ಕೆಲವು ರೋಗಗಳಿಗೆ ನೆಲ್ಲಿಕಾಯಿ ರಾಮಬಾಣವಾಗಿದೆ.
- ನೆಲ್ಲಿಕಾಯಿ ರಸವನ್ನು ತಲೆಗೆ ಹಚ್ಚಿಕೊಂಡರೆ ಹೊಟ್ಟು ಹೋಗುತ್ತದೆ ಮತ್ತು ಹೇನು ನಿವಾರಣೆಯಾಗುತ್ತದೆ.
 
- ಮಕ್ಕಳು ಇದನ್ನು ತಿಂದರೆ ಬಾಲ್ಯದಲ್ಲೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
 
- ಇದರಲ್ಲಿ ನೀರಿನಲ್ಲಿರುವ ಶೇಕಡಾ 80 ರಷ್ಟು ಖನಿಜಾಂಶ, ನೀರು, ಕಾರ್ಬೋಹೈಡ್ರೇಟ್, ಮತ್ತು ಪ್ರೊಟೀನ್ ಗಳಿರುವುದರಿಂದ ದೇಹಕ್ಕೆ ಬೇಕಾದ ಶಕ್ತಿ ಮತ್ತು ಸಾಮರ್ಥ್ಯ ಒದಗಿಸುತ್ತದೆ.
 
- ಬೆಚ್ಚದ ನೆಲ್ಲಿಕಾಯಿ ರಸವನ್ನು ಸ್ನಾನದ ನೀರಿಗೆ ಬೆರಸಿ ಸ್ನಾನ ಮಾಡುವುದರಿಂದ ದೇಹದ ಬೆವರಿ ವಾಸನೆ ಕಡಿಮೆಯಾಗುತ್ತದೆ
 
- ನೆಲ್ಲಿಕಾಯಿ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಗಾಢ ಕಪ್ಪು ಬಣ್ಣ ಮತ್ತು ಹೊಳಪು ಹೊಂದಲು ಸಹಾಯ ಮಾಡುತ್ತದೆ.
 
- ನೆಲ್ಲಿಕಾಯಿಯ ರಸವನ್ನು ಸೇವಿಸುವುದರಿಂದ ಅಥವಾ ಹಸಿಯಾಗಿ ತಿನ್ನುವುದರಿಂದ ಕೂದಲ ಆರೋಗ್ಯ ಹೆಚ್ಚುತ್ತದೆ.
 
- ವಿಟಮಿನ್ 'ಸಿ' ಕೊರತೆಯಿರುವವರಿಗೆ ನೆಲ್ಲಿಕಾಯಿ ರಾಮಬಾಣ.
 
- ಅತಿ ಆಮ್ಲೀಯತೆ ಉಂಟಾದ ಸಂದರ್ಭದಲ್ಲಿ ಒಂದು ಗ್ರಾಂ ನೆಲ್ಲಿಪುಡಿಯನ್ನು ಸ್ವಲ್ಪ ಸಕ್ಕರೆ ಸೇರಿಸಿ ಹಾಲು ಅಥವಾ ನೀರಿನಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿಯಂತೆ ಕುಡಿಯುತ್ತಿದ್ದರೆ ಈ ತೊಂದರೆಯಿಂದ ಶಮನ ದೊರೆಯುತ್ತದೆ.
 
- ನೆಲ್ಲಿಕಾಯಿಯ ಆಮ್ಲ ಜ್ಯೂಸ್ ರಸವನ್ನು ದಿನವೂ ಆಹಾರ ಕ್ರಮ ಮತ್ತು ವ್ಯಾಯಾಮದ ಜೊತೆಗೆ ನಿಯಮಿತವಾಗಿ ಸೇವಿಸುವ ಜೊತೆಗೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. 
 
- ನೆಲ್ಲಿಕಾಯಿಯಲ್ಲಿ ಮೆಗ್ನಿಷಿಯಂ ಮತ್ತು ವಿಟಮಿನ್ ಸಿ ಕಣ್ಣಿನ ದೃಷ್ಟಿ, ಜೀರ್ಣ ಶಕ್ತಿ ಮತ್ತು ಕಬ್ಬಿಣಾಂಶ ಹೆಚ್ಚಾಗಲು ಸಹಕಾರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ಲೋಯಿಂಗ್ ಸ್ಕಿನ್ ನಿಮ್ಮದಾಗಿಸಿಕೊಳ್ಳಲು ಹೀಗೆ ಮಾಡಿ