ಬೆಂಗಳೂರು: ಪ್ರತಿ ನಿತ್ಯ ಹಾಲು ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಹಾಲು ಆರೋಗ್ಯಕ್ಕೆ ಪೌಷ್ಠಿಕ ಆಹಾರ. ಹಾಲು ಸೇವನೆಯ ಕೆಲವು ಅಂಶಗಳನ್ನು ಗಮನಿಸಿ.
· ಒಂದು ಅಧ್ಯಯನದ ಪ್ರಕಾರ, ಬೆಳಗಿನ ಉಪಾಹಾರಕ್ಕೆ ಹಾಲು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ.
· ಮಕ್ಕಳಿಗೆ ಪ್ರತಿ ದಿನ ಸಂಜೆ ವೇಳೆಗೆ ಹಾಲು ಕುಡಿಯಲು ಕೊಡುವುದರಿಂದ ಅವರ ದೃಷ್ಟಿ ಸುಧಾರಿಸುತ್ತದೆ.
· ಊಟದ ನಂತರ ಹಾಲು ಕುಡಿಯುವುದರಿಂದ ನಮ್ಮ ಏಕಾಗ್ರತೆ ಹೆಚ್ಚುವುದು ಮತ್ತು ಚೆನ್ನಾಗಿ ನಿದ್ರೆಯೂ ಬರುತ್ತದೆ.
· ಅದರಲ್ಲೂ ಹದ ಬಿಸಿ ಹಾಲು ಕುಡಿಯುವುದರಿಂದ ಒತ್ತಡ ಕಡಿಮೆಯಾಗುವುದಲ್ಲದೆ, ಉತ್ತಮ ನಿದ್ರೆಗೆ ಸಹಕಾರಿ.
ಹಾಗಾಗಿ ಪ್ರತೀ ದಿನ ಹಾಲು ಕುಡಿಯುವುದನ್ನು ನೆಪ ಹೇಳಿ ತಪ್ಪಿಸುವುದು ಬಿಟ್ಟು ಕುಡಿದು ನೋಡಿ. ಆರೋಗ್ಯ ತಾನಾಗೇ ಸುಧಾರಿಸುತ್ತದೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ