ಬೆಂಗಳೂರು: ಆಲೂಗಡ್ಡೆ ಮಾರುಕಟ್ಟೆಯಿಂದ ತಂದು ಎರಡು ದಿನಗಳೊಳಗೆ ಮೊಳಕೆ ಬರುವಂತಾಗುತ್ತದೆ. ಅದನ್ನು ಫ್ರೆಶ್ ಆಗಿ ಸಂರಕ್ಷಿಸಿಡಲು ಕೆಲವು ಉಪಾಯಗಳಿವೆ ನೋಡಿ.
ಗಾಳಿಯಾಡದಿರಲಿ
ಒಂದು ಕವರ್ ಒಳಗೆ ಗಾಳಿ ಮತ್ತು ಬೆಳಕು ಬೀಳದ ಹಾಗೆ ಆಲೂಗಡ್ಡೆಯನ್ನು ಮುಚ್ಚಿಡಿ. ಇದರಿಂದ ಅದು ಮೊಳಕೆ ಬರುವುದು ತಪ್ಪುತ್ತದೆ.
ಡ್ರೈ ಆಗಿರಲಿ
ಆಲೂಗಡ್ಡೆ ಹಾಕುವ ಪಾತ್ರೆ ಒಣ, ಬೆಚ್ಚಗೆ ಇದ್ದರೆ ಕೊಳೆಯುವುದು, ಮೊಳಕೆ ಬರುವುದು ಸಮಸ್ಯೆ ಬಾರದು.
ಫ್ರಿಡ್ಜ್ ನಲ್ಲಿಡಬೇಡಿ
ಆಲೂಗಡ್ಡೆಯನ್ನು ತಪ್ಪಿಯೂ ಫ್ರಿಡ್ಜ್ ನಲ್ಲಿಡಬೇಡಿ. ಇದು ಸಾಮಾನ್ಯ ಉಷ್ಣತೆಯಲ್ಲಿ ಸಂರಕ್ಷಿಸಬೇಕಾದ ತರಕಾರಿ. ಹೆಚ್ಚು ತಂಪಾದಂತೆ ಕೊಳೆಯುವ ಸಂಭವ ಜಾಸ್ತಿ.
ಹಣ್ಣಿನ ಜತೆ ಬೇಡ
ಆಲೂಗಡ್ಡೆಯನ್ನು ಹಣ್ಣಿನ ಜತೆಗೆ ಇಡಬೇಡಿ. ಹಣ್ಣಿನಿಂದ ಬಿಡುಗಡೆಯಾಗುವ ರಾಸಾಯನಿಕ ಆಲೂಗಡ್ಡೆಯೂ ಕೊಳೆತು ಹೋಗುವುದಕ್ಕೆ ಕಾರಣವಾಗಬಹುದು.
ತೊಳೆಯಬೇಡಿ
ಆಲೂಗಡ್ಡೆಯನ್ನು ತೊಳೆದು ಶೇಖರಿಸಿಡಬೇಡಿ. ಒದ್ದೆಯಾದರೆ ಅದು ಕೊಳೆಯುವ ಸಂಭವ ಹೆಚ್ಚು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.