Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೀವು ಬಳಸುವ ಆಹಾರ ಪದಾರ್ಥ ವಿಷಪೂರಿತವಾಗಿದೆಯೇ ಎಂಬುದನ್ನು ತಿಳಿಯುವುದು ಹೇಗೆ ಗೊತ್ತಾ?

ನೀವು ಬಳಸುವ ಆಹಾರ ಪದಾರ್ಥ ವಿಷಪೂರಿತವಾಗಿದೆಯೇ ಎಂಬುದನ್ನು ತಿಳಿಯುವುದು ಹೇಗೆ ಗೊತ್ತಾ?
ಬೆಂಗಳೂರು , ಸೋಮವಾರ, 30 ಜುಲೈ 2018 (06:48 IST)
ಬೆಂಗಳೂರು : ನೀವು ದಿನನಿತ್ಯ ಬಳಸುವ ಆಹಾರ ಪದಾರ್ಥಗಳನ್ನು ಸರಿಯಾಗಿ ಗಮನಿಸಿ. ಯಾಕೆಂದರೆ ಅವುಗಳಲ್ಲಿ ನಿಮ್ಮ ದೇಹಕ್ಕೆ ಹಾನಿಯನ್ನುಂಟುಮಾಡುವ ವಿಷ ಪದಾರ್ಥಗಳು ಇರುವ ಸಾದ್ಯತೆಗಳಿವೆ. ಒಂದು ವೇಳೆ ಅಂತಹ ಪದಾರ್ಥಗಳನ್ನು ನಿಮಗರಿವಿಲ್ಲದೆ ತಿಂದರೆ, ಅಷ್ಟೇ ನೀವು ಅನಾರೋಗ್ಯದ ಪಾಲಾಗಬಹುದು. ಒಮ್ಮೊಮ್ಮೆ ಅವು ಮಾರಣಾಂತಿಕವೂ ಆಗಬಹುದು. ಆಹಾರದಲ್ಲಿ ಹಾನಿಕಾರಕ ಪದಾರ್ಥಗಳಿದ್ದರೆ, ಅದನ್ನು ಕಂಡು ಹಿಡಿಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.


* ಖರೀದಿಸಿ ತಂದ ಆಲೂಗಡ್ಡೆಗಳು ಸಹಜ ಬಣ್ಣವನ್ನು ಹೊಂದಿರದೆ ಹಸಿರು ಬಣ್ಣದ ಆಲೂಗಡ್ಡೆಗಳು ನಿಮಗೆ ಕಂಡು ಬಂದರೆ, ಒಡನೆಯೇ ಅವುಗಳನ್ನು ಬಿಸಾಡಿ. ಯಾಕೆಂದರೆ ಅವು ವಿಷಪೂರಿತವಾಗಿರುತ್ತವೆ. ಇಂತಹ ಆಲೂಗಡ್ಡೆಗಳನ್ನು ಉಪಯೋಗಿಸಿದರೆ, ನರಮಂಡಲ ವ್ಯವಸ್ಥೆಗೆ ಸಂಬಂಧಿಸಿದ ತೊಂದರೆಗಳು ಉಂಟಾಗುತ್ತವೆ.


*ಕೋಳಿ ಮೊಟ್ಟೆಗಳನ್ನು ಒಡೆದಾಗ, ಅವುಗಳಲ್ಲಿರುವ ಬಿಳಿ ಹಾಗೂ ಹಳದಿ ಭಾಗಗಳು ಬೇರೆಯಾಗಿರದೆ ಒಟ್ಟಿಗಿವೆಯೇ? ಹಾಗಿದ್ದರೆ ಅವು ಆರೋಗ್ಯಕ್ಕೆ ಹಾನಿಕರ. ಅವುಗಳನ್ನು ಉಪಯೋಗಿಸಬೇಡಿ.

* ನಮ್ಮಲ್ಲಿ ಬಹಳಷ್ಟು ಜನ ಬ್ರೆಡ್ ಇಷ್ಟಪಡುತ್ತಾರೆ. ಯಾವಾಗಲೂ ತಾಜಾ ಬ್ರೆಡ್ಡನ್ನೇ ಉಪಯೋಗಿಸಬೇಕು. ಬೂಸಲು ಬಂದ ಬ್ರೆಡ್ಡನ್ನು ತಿನ್ನಲೇ ಬಾರದು. ಒಂದು ವೇಳೆ ಬೂಸಲು ಹಿಡಿದಿರುವ ಭಾಗವನ್ನು ತೆಗೆದುಹಾಕಿ ಉಳಿದ ಭಾಗವನ್ನು ತಿಂದರೂ ಹಾನಿಕರವೇ. ಇದರಿಂದ ಕ್ಯಾನ್ಸರ್ ಬರಬಹುದು.

*ಸಂಗ್ರಹಿಸಿಟ್ಟ ಒಣ ಆಹಾರ ಪದಾರ್ಥಗಳು, ಪಾಪ್ ಕಾರ್ನ್ ಮೊದಲಾದವುಗಳು ವಾಸನೆಯಿಂದ ಕೂಡಿದ್ದರೆ ಅವುಗಳನ್ನು ಬಿಸಾಡಬೇಕು. ಒಂದು ವೇಳೆ ತಿಂದರೆ ಅನಾರೋಗ್ಯವುಂಟಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಜಾ ದಿನ ರೊಮ್ಯಾನ್ಸ್ ಮಾಡಲು ಟಿಪ್ಸ್!