Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಾಯು ಮಾಲಿನ್ಯದಿಂದ ಆರೋಗ್ಯ ಹದಗೆಟ್ಟಿದ್ದರೆ ಈ ಮನೆ ಮದ್ದು ಮಾಡಿ

ವಾಯು ಮಾಲಿನ್ಯದಿಂದ ಆರೋಗ್ಯ ಹದಗೆಟ್ಟಿದ್ದರೆ ಈ ಮನೆ ಮದ್ದು ಮಾಡಿ
ಬೆಂಗಳೂರು , ಶನಿವಾರ, 10 ನವೆಂಬರ್ 2018 (08:56 IST)
ಬೆಂಗಳೂರು: ದೀಪಾವಳಿ ಮುಗಿಯಿತು. ನಗರಗಳಲ್ಲಿ ವಾಯು ಮಾಲಿನ್ಯ ಮಿತಿ ಮೀರುತ್ತಿದೆ. ಇಂತಹ ಸಂದರ್ಭದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆ ಇಲ್ಲಿದೆ ಮನೆ ಮದ್ದು. ಮಾಡಿ ನೋಡಿ!

ಮನೆ ಮದ್ದು 1
ಒಂದು ಲೋಟ ನೀರಿಗೆ 5-6 ತುಳಸಿ ಎಲೆ, ಶುಂಠಿ ಮತ್ತು ಬೆಲ್ಲ ಹಾಕಿಕೊಂಡು ಚೆನ್ನಾಗಿ ಕುದಿಸಿ. ಇದನ್ನು ಬಿಸಿಯಿರುವಾಗಲೇ ಸೇವಿಸಿ. ಈ ರೀತಿ ಮಾಡುತ್ತಿದ್ದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಮನೆ ಮದ್ದು 2
ಒಂದು ಲೋಟ ಕುದಿಸಿದ ನೀರಿಗೆ ತುಳಸಿ ಎಲೆ, ಉಪ್ಪು, ನಿಂಬೆ ರಸ, ಮತ್ತು ಜೇನು ತುಪ್ಪ ಹಾಕಿಕೊಂಡು ಸೇವಿಸಿ. ಇದು ಉಸಿರಾಟ ಸುಗಮಗೊಳಿಸುವುದಲ್ಲದೆ, ಅಲರ್ಜಿ ಹೋಗಲಾಡಿಸುವುದು.

ಮನೆ ಮದ್ದು 3
ಒಂದು ಲೋಟ ಹಾಲಿಗೆ ಸ್ವಲ್ಪ ಅರಶಿನ ಪುಡಿ, ತುಪ್ಪ, ಶುಂಠಿ, ಲವಂಗ, ತುಳಸಿ ಎಲೆ, ಚಕ್ಕೆ ಸೇರಿಸಿಕೊಂಡು ಕುದಿಸಿ. ಬಳಿಕ ಇದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿಕೊಂಡು ಸೇವಿಸಿ. ಇದು ಮಕ್ಕಳಿಗೂ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಕ್ಷಣದಲ್ಲಿ ಕಳೆಗುಂದಿದ ಕಣ್ಣುಗಳನ್ನು ಫ್ರೆಶ್ ಆಗಿಸುವುದು ಹೇಗೆ ಗೊತ್ತಾ?