ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಗರ್ಭಿಣಿ ಹೌದೇ ಇಲ್ಲವೇ ಎಂದು ತಿಳಿಯಲು ನೇರವಾಗಿ ವೈದ್ಯರ ಬಳಿಗೆ ಹೋಗಲೇಬೇಕೆಂದಿಲ್ಲ. ಸ್ವಯಂ ಪರೀಕ್ಷೆಗೊಳಪಡಿಸಲು ಸುಲಭವಾಗಿ ಮೆಡಿಕಲ್ ಗಳಲ್ಲಿ ಕಿಟ್ ಗಳು ಲಭ‍್ಯವಿರುತ್ತದೆ.
ಆದರೆ ಸ್ವಯಂ ಪರೀಕ್ಷೆ ನಡೆಸಲು ಎಷ್ಟು ದಿನವಾಗಬೇಕು ಎಂದು ಗೊತ್ತಿರಬೇಕು. ಋತುಬಂಧದ ದಿನವಾದ ತಕ್ಷಣವೇ ಪರೀಕ್ಷೆಗಳೊಪಡಿಸಿದರೆ ಕೆಲವೊಮ್ಮೆ ಕಿಟ್ ಮೂಲಕ ಸರಿಯಾದ ಫಲಿತಾಂಶ ಸಿಗದೇ ಹೋಗಬಹುದು. ಸರಿಯಾಗಿ ಋತುಬಂಧವಾಗುವ ಮಹಿಳೆ 35 ದಿನ ಕಾದು ನಂತರ ಪರೀಕ್ಷೆಗೊಳಪಡಿಸಿದರೆ ಸರಿಯಾದ ಫಲಿತಾಂಶ ಸಿಗಬಹುದು. ಕೆಲವೊಮ್ಮೆ ಬೇಗನೇ ಪರೀಕ್ಷೆ ನಡೆಸುವುದರಿಂದ ನೆಗೆಟಿವ್ ಫಲಿತಾಂಶ ಬಂದು ನಂತರ ಗರ್ಭವತಿಯಾಗುವ ಸಾಧ್ಯತೆಯೂ ಇರುತ್ತದೆ.