ಬೆಂಗಳೂರು: ಅಪರಿಚಿತ ಮಹಿಳೆಯೊಂದಿಗೆ ಸಂಭೋಗಿಸುವಾಗ ಸುರಕ್ಷಿತ ಸಾಧನೆಗಳನ್ನು ಬಳಸದೇ ಇದ್ದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ಹಲವು ಜಾಹೀರಾತುಗಳೇ ಹೇಳುತ್ತವೆ. ಹಾಗಿದ್ದರೂ ಅಕಸ್ಮಾತ್ತಾಗಿ ಒಬ್ಬ ವೇಶ್ಯೆಯೊಂದಿಗೆ ಲೈಂಗಿಕ ಸಂಪರ್ಕ ಮಾಡುವಾಗ ಸುರಕ್ಷಾ ಸಾಧನ ಕೈಕೊಟ್ಟರೆ ಏನು ಮಾಡೋದು?
ಕಾಂಡೋಮ್ ಬಳಸಿಯೇ ಸಂಭೋಗ ನಡೆಸಿದರೂ ಅನಾಹುತವಾಗಿ ಅದು ತೂತಾಗಿದ್ದರೆ, ಅಥವಾ ಹರಿದುಹೋಗಿದ್ದರೆ ಎಚ್ ಐವಿ ಸೋಂಕು ಹರಡುವ ಭಯ ಕಾಡುತ್ತದೆ. ಇಂತಹ ಸಂದರ್ಭದಲ್ಲಿ ಆಕೆ ತನಗೆ ಅಂತಹ ಸಮಸ್ಯೆ ಇಲ್ಲವೆಂದರೂ ನಿಮ್ಮ ಸುರಕ್ಷತೆಗಾಗಿ ತಜ್ಞ ವೈದ್ಯರನ್ನು ಕಂಡು ಪರೀಕ್ಷೆಯ ಮೂಲಕ ಯಾವುದೇ ಅಪಾಯವಿಲ್ಲ ಎಂದು ದೃಢಪಡಿಸಿಕೊಳ್ಳುವುದು ಉತ್ತಮ.