Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಮ್ಮ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವಂತಹ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ

ನಮ್ಮ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವಂತಹ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ
ಬೆಂಗಳೂರು , ಗುರುವಾರ, 24 ಮೇ 2018 (06:23 IST)
ಬೆಂಗಳೂರು : ನಾವು ಕಾಯಿಲೆಗಳನ್ನು ದೂರ ಮಾಡಲು ಹಲವಾರು ಔಷಧಿಗಳನ್ನ ತೆಗೆದುಕೊಳ್ಳುತ್ತೇವೆ, ಆದರೆ ನಾವು ತೆಗೆದುಕೊಳ್ಳುವ ಔಷಧಗಳು ನಮ್ಮ ದೇಹದೊಂದಿಗೆ ಪ್ರತಿಕ್ರಿಯಿಸಬೇಕು ಎಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಇರಬೇಕು. ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಲು ನಾವು ಕೆಲವು ಆಹಾರ ಪದಾರ್ಥಗಳನ್ನು ಸೇವಿಸ ಬೇಕಾಗುತ್ತದೆ, ಅಂತಹ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ ನೋಡಿ.


*ಬೆಳ್ಳುಳ್ಳಿಗೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಇದೆ. ಅಧ್ಯಯನಗಳ ಪ್ರಕಾರ, ವಾರದಲ್ಲಿ 6ಕ್ಕಿಂತ ಹೆಚ್ಚಿನ ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ಕ್ಯಾನ್ಸರ್‌ ಸಮಸ್ಯೆ ಕಮ್ಮಿ ಆಗುತ್ತದೆಯಂತೆ.

*ಅಣಬೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಧ್ಯಯನಗಳ ಪ್ರಕಾರ, ಬಿಳಿ ರಕ್ತಕಣಗಳ ಕಾರ‍್ಯ ಚಟುವಟಿಕೆಗಳನ್ನು ಆರೋಗ್ಯಪೂರ್ಣವಾಗಿರಿಸುತ್ತದೆ.

*ಗೆಣಸು ರೋಗ ನಿರೋಧಕ ಶಕ್ತಿಯೊಂದಿಗೆ ತ್ವಚೆಗೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ವಿಟಮಿನ್‌ ಎ ತ್ವಚೆಯನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಇದರ ಜತೆ ಕ್ಯಾರೆಟ್‌, ಕುಂಬಳಕಾಯಿ ಕೂಡ ಸೇವಿಸಬಹುದು.

* ಕಿತ್ತಳೆಯಂಥ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ವಿಟಮಿನ್‌ ಸಿ ಇರುವ ಹಣ್ಣುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿ ಇರುತ್ತದೆ. ಅದರಲ್ಲೂ ಕಿತ್ತಳೆ ಹಣ್ಣು ನೆಗಡಿ, ಜ್ವರಗಳು ನಿಮ್ಮನ್ನು ಕಾಡದಂತೆ ಕಾಪಾಡುತ್ತದೆ. ಈ ಹಣ್ಣಿನಲ್ಲಿರುವ ಬೆಟಾಕೆರೋಟಿನ್‌ ದೇಹದಲ್ಲಿನ ಜೀವ ಕಣಗಳನ್ನು ಸಂರಕ್ಷಿಸುತ್ತದೆ. ಕಿತ್ತಳೆಯಲ್ಲಿ ನಾರಿನಾಂಶ ಹೆಚ್ಚಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿ.

ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಇದರಲ್ಲಿನ ನಾರಿನಾಂಶ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.

*ವಿಟಮಿನ್‌ ಇ ಹೊಂದಿರುವ ಕಿವಿ ಹಣ್ಣು ವೈರಲ್‌ ಹಾಗೂ ಬ್ಯಾಕ್ಟೀರಿಯಾ ಸೊಂಕಿನಿಂದ ಇದು ದೇಹವನ್ನು ಕಾಪಾಡುತ್ತದೆ.

*ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುವ ಶಕ್ತಿ ಶುಂಠಿಗೆ ಇದೆ. ಬಿಸಿಯಾದ ಪಾನೀಯಗಳ ಜತೆ ಇದನ್ನು ಸೇರಿಸಿ ಕುಡಿಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಣ್ಣೀರು ಸ್ನಾನ ಅಂದಾಕ್ಷಣ ಓಡಿಹೋಗುವವರು ಇದನೊಮ್ಮೆ ಓದಿ