Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಣ್ಣೀರು ಸ್ನಾನ ಅಂದಾಕ್ಷಣ ಓಡಿಹೋಗುವವರು ಇದನೊಮ್ಮೆ ಓದಿ

ತಣ್ಣೀರು ಸ್ನಾನ ಅಂದಾಕ್ಷಣ ಓಡಿಹೋಗುವವರು ಇದನೊಮ್ಮೆ ಓದಿ
ಬೆಂಗಳೂರು , ಬುಧವಾರ, 23 ಮೇ 2018 (06:02 IST)
ಬೆಂಗಳೂರು : ತಣ್ಣೀರು ಸ್ನಾನ ಅಂದಾಕ್ಷಣ ಅನೇಕರು ಮಾರು ದೂರು ಓಡುತ್ತಾರೆ. ಆಯ್ಯೋ ಆಗಲ್ಲಪ್ಪಾ ತುಂಬಾ ಚಳಿ ಅನ್ನುತ್ತಾರೆ. ಆದರೆ ತಣ್ಣೀರು ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟು ಉಪಯೋಗಕಾರಿ ಎಂದು ತಿಳಿದರೆ ಚಳಿ ಆದರೂ ಪರವಾಗಿಲ್ಲ ಎಂದು ಪ್ರತಿದಿನ ಅದರಲ್ಲೇ ಸ್ನಾನ ಮಾಡುತ್ತೀರಾ.


*ಬೇಸಿಗೆ ಕಾಲದಲ್ಲಿ ಬಿಸಿ ನೀರಿಗಿಂತ ತಣ್ಣೀರು ಸ್ನಾನ ಮಾಡಿದಾಗ ಮನಸ್ಸಿಗೆ ಮತ್ತು ದೇಹಕ್ಕೆ ತುಂಬಾ ಆರಾಮ ಅನಿಸುತ್ತದೆ. ತುಂಬಾ ಸುಸ್ತಾದಾಗ ತಣ್ಣೀರು ಸ್ನಾನ ಮಾಡಿದರೆ ಸುಸ್ತು ಕಡಿಮೆಯಾಗುತ್ತದೆ.


*ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಲರ್ಜಿ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.ವಿಪರೀತಿ ಬೆವರುತ್ತಿದ್ದರೆ ಬೆವರನ್ನು ತಡೆಗಟ್ಟಲು ಕ್ರೀಮ್ ಹೆಚ್ಚುವ ಬದಲು ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು ಇದರಿಂದ ತ್ವಚೆ ಕಾಂತಿ ಹೆಚ್ಚುತ್ತದೆ.

*ರಕ್ತ ಪರಿಚಲನೆಯ ತೊಂದರೆ ಇರುವವರು ನಿತ್ಯವು ತಣ್ಣೀರು ಸ್ನಾನ ಮಾಡುವುದು ಒಳ್ಳೆದು, ಆರ್ಗನ್ ಗಳು ಮತ್ತು ತ್ವಚೆಯ ನಡುವೆ ಇರುವ ರಕ್ತ ಪರಿಚಲನೆ ಸಮಸ್ಯೆಯನ್ನು ತಣ್ಣೀರು ಸ್ನಾನ ಮಾಡುವುದರಿಂದ ದೂರಮಾಡುತ್ತದೆ.

*ತಣ್ಣೀರು ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇರುತ್ತದೆ.

*ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ಬಿಳಿ ರಕ್ತಕಣಗಳು ಹೆಚ್ಚು ಕಾರ್ಯತತ್ಪರವಾಗಿ ವೈರಸ್ ವಿರುದ್ಧ ಹೋರಾಡುತ್ತದೆ.

*ತಣ್ಣೀರು ದೇಹ ಅಧಿಕ ಕೊಬ್ಬನ್ನು ನಿವಾರಿಸಿ ನಿಮಗೆ ಸುಂದರ ಕಾಯವನ್ನು ನೀತ್ತದೆ ಮತ್ತು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

*ತಣ್ಣೀರು ಸ್ನಾನ ಮಾಡುವುದರಿಂದ ನಿಮ್ಮ ಶ್ವಾಸಕೋಶವನ್ನು ತೆರೆದು ಒಂದು ವಿಧದ ವ್ಯಾಯಮವನ್ನು ನೀಡುತ್ತದೆ.

*ತಣ್ಣೀರು ಸ್ನಾನ ಮಾಡುವುದರಿಂದ ಮನಸ್ಸು ಪ್ರಪುಲ್ಲವಾಗುತ್ತದೆ. ಮತ್ತು ಒತ್ತಡ ನಿವಾರಣೆಯಾಗುತ್ತದೆ. ಹಾಗೂ ದೇಹದ ಚಟುವಟಿಕೆಯಿಂದ ಕೂಡಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು