Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಜೆಡಿಎಸ್ ದಿನಕ್ಕೊಂದು ಪಕ್ಷದ ಜತೆ ಸಂಬಂಧ ಬೆಳೆಸಿಕೊಳ್ಳುತ್ತಿದೆ ಎಂದು ಶಾಸಕ ಆರ್. ಅಶೋಕ್ ಅವರು ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.
ಅಪಮಿತ್ರ ಮೈತ್ರಿಯನ್ನು ವಿರೋಧಿಸಿ ನಗರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಮಾತನಾಡಿದ ಆರ್. ಅಶೋಕ್ ಅವರು,’ ಜೆಡಿಎಸ್ ಪಕ್ಷವು ಆನೆ ಜತೆ (ಬಹುಜನ ಸಮಾಜ ಪಕ್ಷ) ಪ್ರೀತಿ ಮಾಡಿ, ಓವೈಸಿ ಜತೆ ಡೇಟಿಂಗ್ ನಡೆಸಿ ಈಗ ಕಾಂಗ್ರೆಸ್ ಜತೆ ಮದುವೆ ಮಾಡಿಕೊಂಡಿದೆ. ಜೆಡಿಎಸ್ ಎಲ್ಲಿಗೆ ಹೋಗುತ್ತದೆ, ಯಾರ ಜತೆ ತಿರುಗಾಡುತ್ತದೆ ಮತ್ತು ಏನು ಮಾಡುತ್ತದೆ ಎಂಬುದು ಏನೂ ಗೊತ್ತೇ ಆಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
‘ಸಿದ್ದರಾಮಯ್ಯ ಅವರನ್ನು ಅವರ ತಾಯಿ ನಾಡು, ಅವರು ಹುಟ್ಟಿಬೆಳೆದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರು ಹೀನಾಯವಾಗಿ ಸೋಲಿಸಿದ್ದಾರೆ. ಅವರು ಮಾನ ಮರ್ಯಾದೆ ಇದ್ದರೆ ರಾಜಕೀಯದಿಂದ ನಿವೃತ್ತ ಹೊಂದಬೇಕು ಎಂದು ಅವರು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ