ಬೆಂಗಳೂರು: ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ನಮ್ಮಲ್ಲಿ ರೋಗಿ ನಿರೋಧ ಶಕ್ತಿ ಹೆಚ್ಚಿಸುವುದರ ಜತೆಗೆ ಆಯಸ್ಸು ವೃದ್ಧಿ ಮಾಡುತ್ತದೆ, ಚರ್ಮಕ್ಕೆ ಉಪಕಾರಿ ಎಂದೆಲ್ಲಾ ನಮಗೆ ಗೊತ್ತು. ಈ ನೆಲ್ಲಿಕಾಯಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರ ಲಾಭವೇನು ಗೊತ್ತಾ?
ಇತ್ತೀಚೆಗಿನ ಜೀವನ ಶೈಲಿ, ಆಹಾರ ಶೈಲಿಯಿಂದಾಗಿ ಎಲ್ಲರಿಗೂ ಹೊಟ್ಟೆ, ಆಸಿಡಿಟಿ ಸಮಸ್ಯೆ ಸಾಮಾನ್ಯ. ನೆಲ್ಲಿಕಾಯಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಅಸಿಡಿಟಿ ಮತ್ತಿತರ ಜೀರ್ಣಸಂಬಂಧೀ ಸಮಸ್ಯೆಗಳು, ಮಲಬದ್ಧತೆ ಇತ್ಯಾದಿ ಸಮಸ್ಯೆಗಳು ದೂರವಾಗುತ್ತದೆ. ಇದರಲ್ಲಿರುವ ಫೈಬರ್ ಅಂಶ ಮಲವಿಸರ್ಜನೆಯನ್ನು ಸುಲಭವಾಗಿಸುತ್ತದೆ ಎಂದು ತಜ್ಞರೇ ಹೇಳುತ್ತಾರೆ.