Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಜುಲೈ 14 ರಿಂದ ಒಂದು ವಾರ ಕಾಲ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿರುವುದು ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಕೆಲವರು ಲಾಕ್ ಡೌನ್ ಮಾಡಿರುವುದು ಉತ್ತಮ ನಿರ್ಧಾರ ಎಂದರೆ ಇನ್ನು ಕೆಲವರು ನಮ್ಮ ಹೊಟ್ಟೆ ಪಾಡೇನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಅದರಲ್ಲೂ ಲಾಕ್ ಡೌನ್ ಕೇವಲ ನೆಪಕ್ಕೆ ಮಾತ್ರ. ಇದು ನಮ್ಮಂಥಾ ಕಾರ್ಮಿಕರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸವಷ್ಟೇ ಎಂದು ದಿನನಿತ್ಯದ ಸಂಪಾದನೆ ನೆಚ್ಚಿಕೊಂಡಿರುವ ಮಂದಿ ಅಭಿಪ್ರಾಯಪಟ್ಟಿದ್ದಾರೆ. ಲಾಕ್ ಡೌನ್ ಮಾಡುವುದಿದ್ದರೆ ಕಟ್ಟುನಿಟ್ಟಾಗಿ ಮಾಡಲಿ. ಅದು ಬಿಟ್ಟು ಕಾಟಾಚಾರಕ್ಕೆ ಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೆಯುವುದು ಬೇಡ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.