Publish Date: Wed, 19 Sep 2018 (19:17 IST)
Updated Date: Wed, 19 Sep 2018 (19:21 IST)
ಬೇಕಾಗುವ ಸಾಮಗ್ರಿಗಳು :
ಒಣ ಹಣ್ಣುಗಳು - ಬಾದಾಮಿ, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಖರ್ಜೂರ 1 ಕಪ್
ಖೋವಾ 25 ಗ್ರಾಂ
ಜೇನುತುಪ್ಪ - 4 ಟೀ ಚಮಚ
ಮಾಡುವ ವಿಧಾನ :
ಒಣ ಹಣ್ಣುಗಳನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಬೇಕು. (ಮಿಕ್ಸಿಗೆ ಹಾಕಿ ಒಂದು ಸಲ ತಿರುವಿದರೂ ಸಾಕು) ನಂತರ ಖೋವಾವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಂಡು ಈಗಾಗಲೇ ಚೂರು ಮಾಡಿದ ಒಣ ಹಣ್ಣುಗಳಿಗೆ ಸೇರಿಸಬೇಕು. ನಂತರ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಜೇನುತುಪ್ಪ ಹಾಕಿ ಉಂಡೆಯನ್ನು ಮಾಡಿದರೆ ರುಚಿ ರುಚಿಯಾದ ಡ್ರೈ ಫ್ರೂಟ್ಸ್ ಲಡ್ಡು ಸವಿಯಲು ಸಿದ್ಧ. ಉಂಡೆ ಮಾಡುವಾಗ ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿದ ಗುಲಾಬಿ ದಳಗಳನ್ನೂ ಸಹ ಹಾಕಬಹುದು.