ಬೆಂಗಳೂರು: ದಪ್ಪಗಿದ್ದವರಿಗೆ ಸಣ್ಣಗಾಗಬೇಕು ಎಂಬ ಚಿಂತೆಯಾದರೆ, ಸಣ್ಣಗಿರುವವರಿಗೆ ದಪ್ಪಗಾಗಬೇಕು ಎಂಬ ಹಂಬಲ. ದಪ್ಪಗಾಗಬೇಕು ಎಂದು ಏನೆಲ್ಲಾ ತಿಂದರೂ ಕೆಲವರು ದಪ್ಪಗಾಗುವುದಿಲ್ಲ. ದಪ್ಪಗಾಗಬೇಕು ಎನ್ನುವವರಿಗೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ಪನ್ನೀರ್, ಚೀಸ್ , ಚಿಕನ್ , ಮೀನು, ಹಾಲಿನ ಉತ್ಪನ್ನಗಳು, ಈ ರೀತಿಯ ಆಹಾರಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
ಕೊಬ್ಬಿನಂಶವಿರುವ ಮೊಸರು ದೇಹದ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ಮೊಸರನ್ನ ತಿನ್ನುತ್ತಾ ಬಂದರೆ ದೇಹಕ್ಕೂ ಒಳ್ಳೆಯದು, ತೂಕವೂ ಹೆಚ್ಚುವುದು.
ರಾತ್ರಿ ಒಣದ್ರಾಕ್ಷಿಯನ್ನು ನೀರಲ್ಲಿ ನೆನೆಸಿ ಬೆಳಿಗ್ಗೆ ತಿನ್ನಿ. ಹೀಗೆ ಮಾಡಿದರೆ ತೂಕ ಹೆಚ್ಚಾಗುತ್ತದೆ.ಜತೆಗೆ ಬಾಳೆಹಣ್ಣನ್ನು ತಿನ್ನಿರಿ. ಇದು ಕೂಡ ತೂಕ ಹೆಚ್ಚಾಗುವುದಕ್ಕೆ ಸಹಕಾರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ