Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಧುಮೇಹ ರೋಗಿಗಳಿಗೆ ಯಾವುದು ಉತ್ತಮ ಹಣ್ಣು ಮತ್ತು ಯಾವುದು ಅಲ್ಲ ಎಂಬ ಮಾಹಿತಿ ಇಲ್ಲಿದೆ ನೋಡಿ

ಮಧುಮೇಹ ರೋಗಿಗಳಿಗೆ ಯಾವುದು ಉತ್ತಮ ಹಣ್ಣು ಮತ್ತು ಯಾವುದು ಅಲ್ಲ ಎಂಬ ಮಾಹಿತಿ ಇಲ್ಲಿದೆ ನೋಡಿ
ಬೆಂಗಳೂರು , ಭಾನುವಾರ, 15 ಜುಲೈ 2018 (06:44 IST)
ಬೆಂಗಳೂರು : ದೇಹದ ಕಾರ್ಯಚಟುವಟಿಕೆಗಳು ಸರಾಗವಾಗಿ ನಡೆಯಬೇಕು ಎಂದರೆ ಪ್ರತಿಯೊಬ್ಬರೂ ಕೂಡ ಹಣ್ಣುಗಳು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವಿಸಬೇಕು. ಆದರೆ ಆಶ್ಚರ್ಯವೆಂದರೆ ಕೆಲವು ಹಣ್ಣುಗಳಲ್ಲಿ ಅತಿಯಾದ ಸಕ್ಕರೆ ಅಂಶವಿರುವುದರಿಂದ ಅದನ್ನು ಮಧುಮೇಹ ರೋಗಿಗಳು ಸೇವಿಸಬಾರದು. ಆದ್ದರಿಂದ ಯಾವ ಹಣ್ಣುಗಳು ಮಧುಮೇಹ ರೋಗಿಗಳಿಗೆ ಉತ್ತಮ ಹಣ್ಣು ಮತ್ತು ಯಾವುದು ಅಲ್ಲ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.


ಉತ್ತಮ ಡಯಾಬಿಟೀಸ್ ಡಯಟ್ ಗಾಗಿ ಈ ಕೆಳಗಿನ ಹಣ್ಣುಗಳು ಅತ್ಯುತ್ತಮಕಾರಿಯಾಗಿದೆ ಮತ್ತು ಇವುಗಳಲ್ಲಿ ಹೈ ಆಂಟಿ ಆಕ್ಸಿಡೆಂಟ್ ಗಳೂ ಕೂಡ ಇದೆ.

• ದ್ರಾಕ್ಷಿ
• ಸೇಬು ಹಣ್ಣುಗಳು
• ಬೆರ್ರೀ
• ಪಪ್ಪಾಯ
• ಏಪ್ರಿಕಾಟ್ಸ್
• ಕ್ಯಾಂಟಲೋಪ್
• ಮಾವಿನ ಹಣ್ಣು
• ಅನಾನಸ್ ಅಥವಾ ಪರಂಗಿ
• ಸಿಟ್ರಸ್ ಹಣ್ಣುಗಳು

ಆದರೆ ಒಣಗಿದ ಹಣ್ಣುಗಳು ಸಕ್ಕರೆಯಿಂದ ಹೆಚ್ಚು ಕೇಂದ್ರೀಕೃತವಾಗಿರುತ್ತದೆ ಮತ್ತು ತಾಜಾ ಹಣ್ಣುಗಳಿಗೆ ಹೋಲಿಸಿದರೆ ಒಂದರಲ್ಲಿ ಮೂರನೇ ಭಾಗದಷ್ಟು ಹೆಚ್ಚು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ. ಆದ್ದರಿಂದ   ಒಣಗಿದ ಹಣ್ಣುಗಳು, ಮತ್ತು ಹಣ್ಣಿನ ರಸಗಳು ಮದುಮೇಹಿಗಳು ಸೇವನೆ ಮಾಡುವುದು ಒಳ್ಳೆಯದಲ್ಲ. ಇವುಗಳು ದೇಹದಲ್ಲಿ ಬೇಗನೆ ಹೀರಿಹೋಗುತ್ತವೆ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಎಂದು ಅಮೇರಿಕಾದ ಡಯಾಬಿಟೀಸ್ ಅಸೋಸಿಯೇಷನ್ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸಕ್ಕೆ ಬಾರದ ಈ ಲೈಂಗಿಕ ಟಿಪ್ಸ್ ಗಳನ್ನು ಕೇಳಲೇಬೇಡಿ!