Publish Date: Thu, 14 Nov 2019 (09:09 IST)
Updated Date: Thu, 14 Nov 2019 (09:10 IST)
ಬೆಂಗಳೂರು: ನನಗೂ ಪತ್ನಿಗೂ ರೊಮ್ಯಾನ್ಸ್ ನಲ್ಲಿ ವಿಪರೀತ ಆಸಕ್ತಿ. ಹೀಗಾಗಿ ದಿನಕ್ಕೆ ಎರಡು ಮೂರು ಬಾರಿ ಸೇರುತ್ತೇವೆ. ಹಾಗಿದ್ದರೂ ಪತ್ನಿಗೆ ಉದ್ರೇಕವಾಗುತ್ತಿಲ್ಲ. ಇದಕ್ಕೆ ಏನಾದರೂ ಔಷಧವಿದೆಯೇ?
ಲೈಂಗಿಕ ಕ್ರಿಯೆ ಎನ್ನುವುದು ಕೇವಲ ದೈಹಿಕ ಕ್ರಿಯೆಯಾಗಬಾರದು. ಇಬ್ಬರೂ ಸಂತೋಷವಾಗಿ ಮನಃಪೂರ್ವಕವಾಗಿ ಮಾಡಿದರಷ್ಟೇ ಲೈಂಗಿಕ ಕ್ರಿಯೆ ಸಂತೋಷ ಕೊಡಬಹುದು. ಒಂದು ವೇಳೆ ಇಬ್ಬರೂ ಆಸಕ್ತಿ ಹೊಂದಿಯೂ ಉದ್ರೇಕವಾಗುತ್ತಿಲ್ಲ ಎಂದರೆ ಫೋರ್ ಪ್ಲೇ ಕಡೆಗೆ ಹೆಚ್ಚು ಗಮನ ಕೊಡಬೇಕು. ಇಬ್ಬರಿಗೂ ಸಂತೋಷ ಸಿಗುವ ಕೆಲಸ ಮಾಡಬೇಕು. ಅದೂ ಸಾಧ್ಯವಾಗದಿದ್ದರೆ ಯಾವುದಾದರೂ ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಬಹುದು.