Publish Date: Wed, 13 Nov 2019 (09:10 IST)
Updated Date: Wed, 13 Nov 2019 (09:11 IST)
ಬೆಂಗಳೂರು: ಅತಿಯಾದ ಬಿಸಿ, ತಾಪಮಾನಕ್ಕೆ ಸೋಕಿಸುವುದರಿಂದ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂದು ಹಲವು ಅಧ್ಯಯನಗಳೇ ಹೇಳಿವೆ.
ಹಾಗಿದ್ದರೆ ಪ್ರತಿನಿತ್ಯ ಬಿಸಿ ನೀರಿನ ಸ್ನಾನ ಮಾಡುವುದರಿಂದ ವೀರ್ಯಾಣು ಸಂಖ್ಯೆ ಕೊರತೆಯುಂಟಾಗುತ್ತದಾ? ಹೀಗೊಂದು ಅನುಮಾನ ಕಾಡಬಹುದು. ಹದ ಬಿಸಿ ನೀರಿನ ಸ್ನಾನದಿಂದ ತೊಂದರೆಯಾಗದು. ಆದರೆ ಅತಿಯಾದ ಬಿಸಿ ನೀರಿನ ಸ್ನಾನದಿಂದ ಮೈಮನಕ್ಕೆ ಹಿತವಾಗಬಹುದು. ಆದರೆ ವೀರ್ಯಾಣುವಿನ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಎಚ್ಚರಿಕೆ ವಹಿಸುವುದು ಒಳಿತು.