Publish Date: Thu, 27 Feb 2020 (15:03 IST)
Updated Date: Thu, 27 Feb 2020 (15:04 IST)
ಪ್ರಶ್ನೆ: ನನ್ನ ಮದುವೆಯಾಗಿ ಒಂದು ವರ್ಷವಾಗುತ್ತಿದೆ. ಮದುವೆಯಾದ ನಂತರ ನನ್ನ ಹೆಂಡತಿ ಜೊತೆಗೆ ನನ್ನ ಸಂಬಂಧ ಚೆನ್ನಾಗಿಲ್ಲ. ಹೀಗಾಗಿ ನನಗೆ
ಮದುವೆಯಾದ ಮೇಲೆಯೂ ಹಳೆಯ ಗೆಳತಿಯರು ನೆನಪಾಗುತ್ತಿದ್ದಾರೆ. ಹಳೇ ಪ್ರೇಯಸಿಯರು ನೀಡಿರೋ ಸುಖ ನೆನಪಾಗುತ್ತಿದೆ. ಅವರೇ ಬೇಕು ಎನಿಸುತ್ತಿದೆ. ಮುಂದೇನು ಮಾಡೋದು?
ಸಲಹೆ : ಕೆಲವೊಮ್ಮೆ ಎಲ್ಲಾ ಸರಿ ಇದ್ದೂ ಕೆಲವರು ಹಳೆಯ ಲವ್ವರ್ ಜತೆ ಸಂಬಂಧವಿಟ್ಟುಕೊಳ್ಳುತ್ತಾರೆ. ಯಾವತ್ತೂ ಎರಡು ದೋಣಿಯ ಮೇಲೆ ಕಾಲಿಡುವುದು ಸುರಕ್ಷಿತವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.
ನೀವು ಈಗಾಗಲೇ ಪ್ರೇಯಸಿಯರು ಅಂದರೆ ಹಲವು ಹುಡುಗಿಯರ ಜೊತೆ ಲೈಂಗಿಕ ಕ್ರಿಯೆ ನಡೆಸಿರಬಹುದು. ಅಂಥ ಸುಖವನ್ನು ಹೆಂಡತಿಯಿಂದ ಪಡೆಯಲು ಹವಣಿಸಿ ವಿಫಲರಾಗುತ್ತಿರಬಹುದು. ಪ್ರೇಯಸಿ ನೀಡಿದಂತೆ ಪತ್ನಿ ಸುಖ ನೀಡಬೇಕೆಂಬುದೇನೂ ಇಲ್ಲ. ಅವರವರ ಇಷ್ಟನಿಷ್ಟಾಗಳು ಬೇರೆ ಥರನಾಗಿರುತ್ತವೆ.
ನೀವು ಪತ್ನಿಯ ಮನವೊಲಿಸಿ ನಿಮ್ಮ ಆಸೆ ಹೇಳಿದರೆ ಆಗ ಸಮಸ್ಯೆ ಪರಿಹಾರವಾಗಬಲ್ಲದು. ಅದನ್ನು ಬಿಟ್ಟು ನೀವು ಹಳೇ ಲವರ್ ಗಳ ಜೊತೆಗೆ ಹೋದರೆ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.