Publish Date: Sun, 16 Feb 2020 (13:30 IST)
Updated Date: Sun, 16 Feb 2020 (13:32 IST)
ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಕೆಲವು ಹಣ್ಣು ಹಾಗೂ ತರಕಾರಿಗಳು ಸಹಕಾರಿಯಾಗಿದೆ. ಅದೇ ರೀತಿ ಕೆಲವು ತೈಲಗಳು ಹಾಗೂ ಸುವಾಸನೆಗಳು ಕೂಡ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತವೆ.
ರೋಮ್ಯಾನ್ಸ್ ಗೂ ಮುನ್ನ ಬೆಡ್ ರೂಂನಲ್ಲಿ ಸುಗಂಧಿತ ಪರಿಮಳ ಬೀರುವ ಸ್ಪ್ರೇ ಬಳಸಿ. ಗುಲಾಬಿ ತೈಲ ಇಂದ್ರೀಯಗಳಿಗೆ ಆರಾಮ ನೀಡುವುದಲ್ಲದೆ ಈ ತೈಲ ಹಾಕಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ರೋಮ್ಯಾಂಟಿಕ್ ಮೂಡ್ ಗೆ ಕರೆದೊಯ್ಯುತ್ತದೆ. ಲವಂಗದ ತೈಲ ಒತ್ತಡವನ್ನು ಕಡಿಮೆ ಮಾಡಿ, ಒಳ್ಳೆಯ ಮೂಡ್ ತರಿಸುತ್ತದೆ. ದಾಲ್ಚಿನಿ ತೊಗಟೆಗಳ ತೈಲ ಲೈಂಗಿಕ ಸಮಸ್ಯೆಯನ್ನು ನಿವಾರಿಸುತ್ತದೆ.
ಶ್ರೀಗಂಧ ತೈಲದ ಪರಿಮಳ ಲೈಂಗಿಕತೆ ಬಯಕೆ ಹೆಚ್ಚಿಸುವುದಲ್ಲದೇ ಪ್ರೀತಿ ಮಾಡುವ ಶಕ್ತಿ ನೀಡುತ್ತದೆ. ಆದ್ದರಿಂದ ಇದನ್ನು ಪುರುಷರು ಹೆಚ್ಚಾಗಿ ಬಳಸುತ್ತಾರೆ. ಲ್ಯಾವೆಂಡರ್ ಹೂ ತೈಲವನ್ನು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹಾರ್ಮೋನುಗಳ ಸಮತೋಲನವನ್ನು ಕಾಪಾಡುವುದರಿಂದ ಇದನ್ನು ಎದೆ, ಮಣಿಕಟ್ಟು ಮತ್ತು ಕಿವಿಯ ಹಿಂಭಾಗದಲ್ಲಿ ಹಚ್ಚಿಕೊಳ್ಳುವುದರಿಂದ ಉತ್ತಮ ಪರಿಣಾಮ ಬೀರುತ್ತದೆ.