Publish Date: Sun, 16 Feb 2020 (13:28 IST)
Updated Date: Sun, 16 Feb 2020 (13:29 IST)
ಪ್ರಶ್ನೆ: ಸರ್, ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ಒಂದು ಮಗು ಇದೆ. ಗಂಡನಿಂದ ನನಗೆ ಎರಡು ಮೂರು ವರ್ಷಗಳಿಂದ ಸಂಪೂರ್ಣ ಸುಖ ಸಿಗುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಕೆಲವೇ ತಿಂಗಳು ನಾವಿಬ್ಬರೂ ಚೆನ್ನಾಗಿದ್ದೆವು. ಆ ಬಳಿಕ ಅವರು ಹೆಚ್ಚಿಗೆ ನನ್ನ ಮೇಲೆ ಪ್ರೀತಿ ತೋರುತ್ತಿಲ್ಲ. ನನಗೆ ಸಮಯ ಕೊಡುತ್ತಿಲ್ಲ.
ಈ ನಡುವೆ ನಾನು ಇನ್ಸ್ಟಾ ಗ್ರಾಮ್ ನಲ್ಲಿ ಪರಿಚಯವಾದನೊಬ್ಬನನ್ನು ಪ್ರೀತಿಸೋಕೆ ಶುರುಮಾಡಿರುವೆ. ಅವನಿಗೆ ಪರಿಚಯವಾಗಿ ಕೆಲವೇ ದಿನಗಳಲ್ಲಿ ಮೈ, ಮನ ಕೊಟ್ಟಿರುವೆ. ನನ್ನ ಗಂಡನಿಗಿಂತ ಇನ್ಟ್ಸಾ ಗ್ರಾಮ್ ನ ಗೆಳೆಯನೇ ಹೆಚ್ಚಿನ ಸುಖ ಕೊಡುತ್ತಿದ್ದಾನೆ. ನಾನು ಗಂಡನೊಂದಿಗೆ ಇರಲಾ? ಬೇಡವಾ?
ಉತ್ತರ: ನಿಮ್ಮ ಭವಿಷ್ಯ ನಿರ್ಧಾರ ನಿಮ್ಮ ಕೈಯಲ್ಲೇ ಇದೆ. ಅಲ್ಪಕಾಲದ ಕಾಮ ಸುಖಕ್ಕೆ ನಿಮ್ಮ ಭವಿಷ್ಯವನ್ನು ಬಲಿಕೊಡಬೇಡಿ. ಮದುವೆಯಾದ ಮೇಲೆ ಗಂಡನಿಗೆ ಸರ್ವಸ್ವ ಅರ್ಪಿಸಬೇಕು ಎಂಬುದನ್ನ ಮರೆತಿರುವ ನೀವು, ನಿಮಗರಿವಿಲ್ಲದಂತೆ ನಿಮ್ಮ ಕಾಲ ಮೇಲೆ ಕಲ್ಲು ಎಳೆದುಕೊಂಡಿದ್ದೀರಿ.
ಗಂಡ ಬೇಕೋ ಅಥವಾ ಇನಿಯ ಬೇಕು ಎಂಬುದನ್ನು ನೀವೇ ನಿರ್ಧರಿಸಿ. ಮಗುವಿನ ಭವಿಷ್ಯದ ಬಗ್ಗೆಯೂ ಸ್ವಲ್ಪ ಆಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ.