ಪ್ರಶ್ನೆ: ನಾನು 26 ವರ್ಷವಯಸ್ಸಿನವಳಾಗಿದ್ದು, ನನಗೆ 3 ತಿಂಗಳಹಿಂದೆಎಂಗೇಜ್ಮೆಂಟ್ಆಗಿದೆ. ಇದುಅರೆಂಜ್ಮ್ಯಾರೇಜ್. ನಾನುಮದುವೆಯಾಗುವಹುಡುಗವಿದ್ಯಾವಂತನಾಗಿದ್ದು, ಉದಾರಮನೋಭಾವದವನಾಗಿದ್ದಾನೆ.
ಉತ್ತರ: ನಿಮಗೆ ನಿಮ್ಮ ಮಾಜಿ ಗೆಳೆಯನ ನೆನಪು ಕಾಡುತ್ತಿರುವುದರಿಂದ ಈ ಸಮಸ್ಯೆಯಿಂದ ನೀವು ಹೊರಬರಲು ಮನಶಾಸ್ತ್ರಜ್ಞರ ಸಹಾಯ ಪಡೆದುಕೊಳ್ಳುವುದು ಉತ್ತಮ. ಹಾಗೇ ನೀವು ಮದುವೆಯಾಗಲು ಇದು ಸರಿಯಾದ ಸಮಯವಲ್ಲ. ಆದ್ದರಿಂದ ನಿಮ್ಮ ಮದುವೆಯನ್ನು ಮುಂದೂಡುವುದು ಉತ್ತಮ.
ಹಾಗೇ ನಾನು ಮೊದಲನೇಯದಾಗಿ ನಿಮಗೆ ತಿಳಿಸುವುದೆನೆಂದರೆ ನೀವು ಬಾಯ್ ಫ್ರೆಂಡ್ ಜೊತೆ ಇದ್ದದ್ದು ನಿಮ್ಮ ಭೂತಕಾಲದ ಸಮಯದಲ್ಲಿ ಅದನ್ನು ನೀವು ಬದಲಿಸಲು ಸಾಧ್ಯವಿಲ್ಲ. ಎರಡನೇಯದಾಗಿ ಈಗ ನಿಮಗೆ ಮದುವೆ ನಿಶ್ಚಿಯವಾದ್ದರಿಂದ ನೀವು ಅದರ ಬಗ್ಗೆ ಗಮನಹರಿಸುವುದು ಉತ್ತಮ. ಕೊನೆಯದಾಗಿ ನಿಮ್ಮ ಭವಿಷ್ಯ ಏನೆಂದು ನಿಮಗೆ ತಿಳಿಯದ ಕಾರಣ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.